alex Certify ಮನೆಯಲ್ಲೇ ಸುಲಭವಾಗಿ ತಯಾರಿಸಿ ರೆಸ್ಟೋರೆಂಟ್ ​ಶೈಲಿಯ ಪಾಲಕ್​ ಪನ್ನೀರ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಸುಲಭವಾಗಿ ತಯಾರಿಸಿ ರೆಸ್ಟೋರೆಂಟ್ ​ಶೈಲಿಯ ಪಾಲಕ್​ ಪನ್ನೀರ್​​

ಬೇಕಾಗುವ ಸಾಮಗ್ರಿ :

ಪನ್ನೀರ್​ – 200 ಗ್ರಾಂ, ಪಾಲಾಕ್​ ಸೊಪ್ಪು – 2 ಕಟ್ಟು, ಪಲಾವ್​ ಎಲೆ – 3, ಜೀರಿಗೆ – 1/2 ಚಮಚ, ದಾಲ್ಚಿನ್ನಿ – 2, ಚಕ್ಕೆ – ಚಿಕ್ಕ ತುಂಡು, ಬೆಣ್ಣೆ – 2ಚಮಚ, ಕಸೂರಿ ಮೇತಿ – 3ಚಮಚ, ಶುಂಠಿ – 3/4 ಇಂಚು, ಹಸಿ ಮೆಣಸು – 5, ಗರಂ ಮಸಾಲಾ – 3/4 ಚಮಚ, ಬೆಳ್ಳುಳ್ಳಿ – 7 ಎಸಳು, ಫ್ರೆಶ್​ ಕ್ರೀಂ – 1 ಚಮಚ, ಈರುಳ್ಳಿ 1, ಟೊಮೆಟೊ – 1, ಉಪ್ಪು, ಅಡುಗೆ ಎಣ್ಣೆ.

ಮಾಡುವ ವಿಧಾನ :

ಪಾತ್ರೆಯಲ್ಲಿ ನೀರನ್ನ ಬಿಸಿ ಮಾಡಿ. ಇದಕ್ಕೆ ಪಾಲಕ್​ ಎಲೆಯನ್ನ ಹಾಕಿ. ಸ್ವಲ್ಪ ಉಪ್ಪು ಹಾಕಿ 2 ನಿಮಿಷ ಬೇಯಿಸಿ. ಈ ಪಾಲಕ್​ ಸೊಪ್ಪನ್ನ ತಣ್ಣನೆಯ ನೀರಿರುವ ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಬೇಯಿಸಿದ ಪಾಲಾಕ್​ ಎಲೆಯನ್ನ ಮಿಕ್ಸಿ ಜಾರಿಗೆ ಹಾಕಿ. ಇದರ ಜೊತೆಯಲ್ಲಿ ಮೆಣಸು, ಶುಂಠಿ ಹಾಗೂ ಬೆಳ್ಳುಳ್ಳಿಯೂ ಸೇರಿಸಿ. ಅಗತ್ಯ ಪ್ರಮಾಣದಷ್ಟು ನೀರನ್ನ ಹಾಕಿ ಪೇಸ್ಟ್​ ರೀತಿಯಲ್ಲಿ ರುಬ್ಬಿಕೊಳ್ಳಿ.

ಇನ್ನೊಂದು ಪಾತ್ರೆಗೆ ಬೆಣ್ಣೆಯನ್ನ ಹಾಕಿ. ಈ ಬೆಣ್ಣೆಯಲ್ಲಿ ಪನ್ನೀರ್​ನ್ನು ಹುರಿದುಕೊಳ್ಳಿ. ಇದನ್ನ ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಇದೆ ಬೆಣ್ಣೆ ಇರುವ ಪಾತ್ರೆಗೆ ಚಕ್ಕೆ, ಜೀರಿಗೆ, ಪಲಾವ್​ ಎಲೆ, ದಾಲ್ಚಿನ್ನಿಯನ್ನ ಹಾಕಿ. ಈಗ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಟೊಮ್ಯಾಟೋವನ್ನ ಹಾಕಿ ಚೆನ್ನಾಗಿ ಫ್ರೈ ಮಾಡಿದ ಬಳಿಕ ಗರಂ ಮಸಾಲಾ ಹಾಗೂ ಉಪ್ಪನ್ನ ಹಾಕಿ ಸರಿಯಾಗಿ ಹುರಿದುಕೊಳ್ಳಿ. ಇದೀಗ ಪಾಲಕ್​ ಮಿಶ್ರಣವನ್ನ ಈ ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ಬೇಯುತ್ತಿದ್ದಂತೆಯೇ ಪನ್ನೀರ್​ನ್ನು ಹಾಕಿ ಬಳಿಕ ಫ್ರೆಶ್​ ಕ್ರೀಂ ಹಾಕಿ.

ಇದಕ್ಕೆ ಗರಂ ಮಸಾಲಾ ಹಾಗೂ ಕಸೂರಿ ಮೇತಿಯನ್ನ ಹಾಕಿ. ಒಂದೆರಡು ನಿಮಿಷ ಬಿಟ್ಟು ಸ್ಟೌ ಆಫ್​ ಮಾಡಿ. ಪರಾಟಾ, ರೋಟಿಯ ಜೊತೆ ಸವಿಯಲು ನೀಡಿ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...