
ಪರದೆಗಾಗಿ ಹೊರಗಿನಿಂದ ದುಬಾರಿ ಬಟ್ಟೆಯನ್ನು ಖರೀದಿಸುವ ಅಗತ್ಯವಿಲ್ಲ. ಮನೆಯಲ್ಲಿರುವ ಬಟ್ಟೆಗಳನ್ನೇ ಇದಕ್ಕೆ ಬಳಸಬಹುದು.
ಹಳೆಯ ಸೀರೆ : ಫ್ಯಾಷನ್ ಹೋಗಿದೆ ಎನ್ನುವ ಕಾರಣಕ್ಕೆ ಅಥವಾ ಹಳೆಯದಾಗಿದೆ ಎನ್ನುವ ಕಾರಣ ನೀಡಿ ನೀವು ಸೀರೆಯನ್ನು ಮೂಲೆಗೆ ಹಾಕಿರುತ್ತೀರಾ. ಇದೇ ನಿಮ್ಮ ಉಪಯೋಗಕ್ಕೆ ಬರುತ್ತೆ. ರೇಷ್ಮೆ ಸೀರೆಗಳು ತುಂಬಾ ಸುಂದರವಾಗಿ ಕಾಣುತ್ತವೆ.
ದುಪ್ಪಟ್ಟಾ : ಚೂಡಿ ಹಳೆಯದಾದ್ರೂ ದುಪ್ಪಟ್ಟಾ ಚೆನ್ನಾಗೆ ಇರುತ್ತೆ. ಅದನ್ನು ನೀವು ಪರದೆಗೆ ಬಳಸಬಹುದು. ಅನೇಕ ಬಣ್ಣಗಳಲ್ಲಿರುವುದರಿಂದ ಸುಲಭವಾಗಿ ಮಿಕ್ಸ್ ಅಂಡ್ ಮ್ಯಾಚ್ ಆಗುತ್ತದೆ.
ಬೆಡ್ ಶೀಟ್ : ಕಡಿಮೆ ಖರ್ಚಿನಲ್ಲಿ ಪರದೆ ಮಾಡುವುದರಲ್ಲಿ ಇದು ಒಂದು. ಹಳೆ ಬೆಡ್ ಶೀಟನ್ನು ಪರದೆ ಮಾಡಿದ್ರೆ ಚೆನ್ನಾಗಿ ಕಾಣುತ್ತದೆ. ಮೂರು ನಾಲ್ಕು ಬೆಡ್ ಶೀಟ್ ಸೇರಿಸಿ ಪರದೆ ಮಾಡಿದ್ರೆ ಚೆನ್ನ.
ಟೇಬಲ್ ಕ್ಲಾಥ್ : ಟೇಬಲ್ ಕ್ಲಾಥ್ ನಿಂದ ಕೂಡ ಪರದೆ ಮಾಡಬಹುದು. ಇದು ಮನೆಗೆ ಹೊಸ ಲುಕ್ ನೀಡುತ್ತದೆ.