ಸಂಜೆಯ ಸಮಯಕ್ಕೆ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಅನಿಸುತ್ತೆ. ಮನೆಯಲ್ಲಿ ನೂಡಲ್ಸ್ ಇದ್ದರೆ ನೀವೇ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
¾ ಕಪ್- ನೂಡಲ್ಸ್, 1-ಕ್ಯಾರೆಟ್, ½-ಗ್ರೀನ್ ಬೆಲ್ ಪೆಪ್ಪರ್, ½ -ರೆಡ್ ಬೆಲ್ ಪೆಪ್ಪರ್, ಸ್ವಲ್ಪ 3-ಬೇಬಿ ಕಾರ್ನ್, ¼ ಕಪ್- ಚಿಕ್ಕದ್ದಾಗಿ ಹಚ್ಚಿಕೊಂಡ ಕ್ಯಾಬೇಜ್, 2- ಟೇಬಲ್ ಸ್ಪೂನ್-ಚಿಕ್ಕದ್ದಾಗಿ ಹಚ್ಚಿಕೊಂಡ ಸ್ಪ್ರಿಂಗ್ ಆನಿಯನ್, ½ ಇಂಚು-ಶುಂಠಿ ತುರಿ, 2-ಬೆಳ್ಳುಳ್ಳಿ ಎಸಳು ಚಿಕ್ಕದ್ದಾಗಿ ಹಚ್ಚಿಕೊಂಡಿದ್ದು, 1 ½ ಟೀ ಸ್ಪೂನ್- ಸೋಯಾ ಸಾಸ್, 1 ಟೀ ಸ್ಪೂನ್-ವಿನೇಗರ್, 1 ಟೀ ಸ್ಪೂನ್- ಕಾಳುಮೆಣಸಿನ ಪುಡಿ, 1ಟೀ ಸ್ಪೂನ್- ಸಕ್ಕರೆ. ಉಪ್ಪು-ರುಚಿಗೆ ತಕ್ಕಷ್ಟು, 3 ಟೀ ಸ್ಪೂನ್- ಎಣ್ಣೆ.
ಮೊದಲಿಗೆ ಒಂದು ಬೌಲ್ ಗೆ 5 ಕಪ್ ನೀರು ಹಾಕಿ ನೂಡಲ್ಸ್ ಸೇರಿಸಿ ಅದಕ್ಕೆ ಉಪ್ಪು, 2 ಹನಿ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿಕೊಂಡು ನೀರು ಬಸಿದಿಟ್ಟುಕೊಳ್ಳಿ.
ಬೇಬಿ ಕಾರ್ನ್, ಕ್ಯಾರೆಟ್, ಬೆಲ್ ಪೆಪ್ಪರ್ ಅನ್ನು ತೆಳ್ಳಗೆ ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ದಪ್ಪ ತಳದ ಪಾತ್ರೆ ಇಟ್ಟು ಅದಕ್ಕೆ 3 ಟೀ ಸ್ಪೂನ್ ಎಣ್ಣೆ ಹಾಕಿ. ನಂತರ ಶುಂಠಿ, ಬೆಳ್ಳುಳ್ಳಿ ಸ್ಪ್ರಿಂಗ್ ಆನಿಯನ್ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ನಂತರ ಹೆಚ್ಚಿಟ್ಟುಕೊಂಡ ತರಕಾರಿ ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಸೋಯಾ ಸಾಸ್, ಉಪ್ಪು, ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಆಮೇಲೆ ವಿನೇಗರ್, ಕಾಳುಮೆಣಸಿನ ಪುಡಿ ಸೇರಿಸಿ 2 ನಿಮಿಷಗಳ ಕಾಲ ಹುರಿಯಿರಿ. ಇದಾದ ಮೇಲೆ ಬೇಯಿಸಿದ ನೂಡಲ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.