1 ½ ಕಪ್ – ಹಾಲು, 1 ಕಪ್ – ಸಕ್ಕರೆ, ¼ ಕಪ್ – ತುಪ್ಪ, ¼ ಕಪ್ – ಕಾರ್ನ್ ಫ್ಲೋರ್, ಚಿಟಿಕೆ – ಆರೇಂಜ್ ಫುಡ್ ಕಲರ್, ಸ್ವಲ್ಪ – ಬಾದಾಮಿ ಚೂರುಗಳು, ಪಿಸ್ತಾ – ಸ್ವಲ್ಪ, ಚಿಟಿಕೆ – ಏಲಕ್ಕಿ ಪುಡಿ.
ಮಾಡುವ ವಿಧಾನ:
ಒಂದು ದೊಡ್ಡ ಪಾತ್ರೆಗೆ ಹಾಲು, ತುಪ್ಪ, ಸಕ್ಕರೆ, ಕಾರ್ನ್ ಫ್ಲೋರ್ ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಇರಿ. ಸ್ವಲ್ಪ ಹೊತ್ತಿನ ನಂತರ ಅದು ದಪ್ಪ ಮಿಶ್ರಣದ ಹದಕ್ಕೆ ಬರುತ್ತದೆ. ನಂತರ ಇದಕ್ಕೆ ಚಿಟಿಕೆ ಏಲಕ್ಕಿ ಪುಡಿ, ಫುಡ್ ಕಲರ್ ಸೇರಿಸಿ. ಆಮೇಲೆ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕೈಯಾಡಿಸುತ್ತಾ ಇರಿ.
ಈ ಮಿಶ್ರಣ ಸರಿಯಾಗಿ ಹದಕ್ಕೆ ಬರುವವರಗೆ ಮಿಕ್ಸ್ ಮಾಡುತ್ತಾ ಇರಿ. ನಂತರ ಈ ಮಿಶ್ರಣವನ್ನು ಒಂದು ಬಟರ್ ಪೇಪರ್ ಮೇಲೆ ಹಾಕಿ ಅದರ ಮೇಲೆ ಇನ್ನೊಂದು ಬಟರ್ ಪೇಪರ್ ಹಾಸಿ ಲಟ್ಟಣಿಗೆಯಿಂದ ತೆಳುವಾಗಿ ಲಟ್ಟಿಸಿಕೊಳ್ಳಿ.
ನಂತರ ಅದರ ಮೇಲೆ ಬಾದಾಮಿ, ಪಿಸ್ತಾ ಚೂರುಗಳನ್ನು ಹಾಕಿ 2 ಗಂಟೆಗಳ ಕಾಲ ಹಾಗೇ ಬಿಡಿ. ನಂತರ ಚಾಕುವಿನಿಂದ ಕತ್ತರಿಸಿಕೊಳ್ಳಿ. ರುಚಿಕರವಾದ ಬಾಂಬೆ ಹಲ್ವಾ ಸವಿಯಲು ರೆಡಿ.