ಯಾವುದೇ ರಾಸಾಯನಿಕಗಳನ್ನು ಬಳಸದೆ ಮನೆಯಲ್ಲೇ ವ್ಯಾಕ್ಸಿಂಗ್ ತಯಾರಿಸಬಹುದು. ಬ್ಯೂಟಿಪಾರ್ಲರ್ ಗೆ ತೆರಳದೆ ಸೌಂದರ್ಯದ ಕಾಳಜಿ ವಹಿಸುವ ಸುಲಭ ಟಿಪ್ಸ್ ಇಲ್ಲಿದೆ.
ಎರಡು ಕಪ್ ಸಕ್ಕರೆಗೆ, ಕಾಲು ಕಪ್ ನೀರು ಹಾಗೂ ಕಾಲು ಕಪ್ ನಿಂಬೆ ರಸ ಬೆರೆಸಿ ದೊಡ್ಡ ಪಾತ್ರೆಯಲ್ಲಿಟ್ಟು ಒಲೆಯ ಮೇಲಿಡಿ. ಸಕ್ಕರೆ ಗಂಟಾಗದಂತೆ ನಿರಂತರ ಕಲಕುತ್ತಿರಿ. ಮಿಶ್ರಣ ಗುಳ್ಳೆ ಬಂದು ಕುದಿಯಲು ಆರಂಭವಾಗುತ್ತಿದ್ದಂತೆ ಗ್ಯಾಸ್ ಉರಿಯನ್ನು ಕಡಿಮೆ ಮಾಡಿ, ಕಲಸುವುದನ್ನು ನಿಲ್ಲಿಸದಿರಿ.
ಮಿಶ್ರಣ ಗಾಢ ಕಂದು ಬಣ್ಣಕ್ಕೆ ಬರುತ್ತಲೇ ಸಿರಪ್ ರೂಪದಲ್ಲಿರುವ ದ್ರಾವಣವನ್ನು ಗಾಜಿನ ಜಾರಿಗೆ ಸುರಿಯಿರಿ. ಅದನ್ನು ತಣ್ಣಗಾಗಲು ಬಿಡಿ. ಒಂದು ಗಂಟೆ ಬಿಟ್ಟು ಪ್ಲಾಸ್ಟಿಕ್ ಸ್ಪಾಟುಲಾ ಅಥವಾ ಪಾಪ್ಸಿಕಲ್ ಸ್ಟಿಕ್ ಬಳಸಿ ತ್ವಚೆಗೆ ಹಚ್ಚಿ. ವ್ಯಾಕ್ಸ್ ತೆಗೆಯುವ ಸ್ಕ್ರಿಪ್ಸ್ಗಳನ್ನು ಬಳಸಿ, ತ್ವಚೆಯ ಮೇಲೆ ಗಟ್ಟಿಯಾಗಿ ಒತ್ತಿಡಿ. 30 ಸೆಕೆಂಡ್ ಬಳಿಕ ಇನ್ನೊಂದು ಕೈಯಿಂದ ನಿಧಾನವಾಗಿ ಎಳೆಯಿರಿ. ಆಗ ಮೇಣದ ಪಟ್ಟಿಯ ಮೇಲೆ ಕೂದಲು ಬಂದಿರುವುದನ್ನು ನೀವು ಕಾಣಬಹುದು.
ಕೊನೆಗೆ ತಣ್ಣನೆಯ ನೀರು ಅಥವಾ ಐಸ್ ಕ್ಯೂಬ್ ನಿಂದ ತ್ವಚೆಗೆ ಮಸಾಜ್ ಮಾಡಿ. ಬಾಡಿ ಲೋಷನ್ ಹಚ್ಚಿ, ಬಿಸಿನೀರಿನ ಸ್ನಾನದಿಂದ ದೂರವಿರಿ