ಮನೆಯಲ್ಲೇ 100% ನ್ಯಾಚುರಲ್ ಆಗಿರುವ ಫೇರ್ ನೆಸ್ ಕ್ರೀಮ್ ಮಾಡಿ ಕೆಮಿಕಲ್ ಗಳಿಂದ ದೂರವಿರಬಹುದು. ಈ ಕ್ರೀಮ್ ಮಾಡುವುದನ್ನು ಕಲಿಯೋಣ.
ಮೊದಲು ಈ ಕ್ರೀಮ್ ಗೆ ಬೀಸ್ ವ್ಯಾಕ್ಸ್ ಬಳಸಬೇಕು. ಇದು ಜೇನಿನ ಗೂಡಿನಿಂದ ತಯಾರಾಗಿರುತ್ತದೆ. ಇದನ್ನು ಎಲ್ಲಾ ರೀತಿಯ ಕ್ರೀಮ್, ಲಿಪ್ ಸ್ಟಿಕ್ ರೆಡಿ ಮಾಡಲು ಉಪಯೋಗಿಸುತ್ತಾರೆ. ಇದರಲ್ಲಿ ಯಾವುದೇ ಕೆಮಿಕಲ್ ಇರುವುದಿಲ್ಲ. ಇದು ನ್ಯಾಚುರಲ್ ವ್ಯಾಕ್ಸ್.
ಮೊದಲು ಒಂದು ಟೇಬಲ್ ಸ್ಪೂನ್ ಬೀಸ್ ವ್ಯಾಕ್ಸ್ ಗೆ 2 ಟೇಬಲ್ ಸ್ಪೂನ್ ಆಲಿವ್ ಆಯಿಲ್ ಸೇರಿಸಿ. ಶುದ್ಧ ತೆಂಗಿನ ಎಣ್ಣೆಯನ್ನಾದರೂ ಬಳಸಬಹುದು. ಲಿಕರಾಯಿಸ್ ಅಂದರೆ ಇದು ಮುಲೇತಿ ರೂಟ್ ತ್ವಚೆಯ ವೈಟನಿಂಗ್ ಡಾರ್ಕ್ ಸ್ಪಾಟ್ ಕಡಿಮೆ ಮಾಡಲು ನೆರವಾಗುತ್ತದೆ. ಇದನ್ನು ಪುಡಿ ಮಾಡಿ ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಕುದಿಸಿ ನಂತರ ಅದರ ಬಣ್ಣ ಬದಲಾಗುತ್ತದೆ. ಅದನ್ನು ಸೇರಿಸಿ.
ಮೊದಲಿನ ಎರಡನ್ನು ಮೆಲ್ಟ್ ಮಾಡಿಕೊಂಡು ನಂತರ ಕುದಿಸಿದ ಆ ನೀರನ್ನು ಎರಡನ್ನೂ ಗ್ರೈಂಡರ್ ನಲ್ಲಿ ಮಿಕ್ಸ್ ಮಾಡಿ ಬೀಸ್ ವ್ಯಾಕ್ಸ್ ಆಲಿವ್ ಆಯಿಲ್ ಮತ್ತು 10 ಡ್ರಾಪ್ ಎಸೆನ್ಷಿಯಲ್ಸ್ ಆಯಿಲ್ ಹಾಕಿ. ಹೀಗೆ 10 ನಿಮಿಷ ಬ್ಲೆಂಡ್ ಮಾಡಿದ ಮೇಲೆ ನಿಮ್ಮ ಕ್ರೀಮ್ ರೆಡಿ.