ಪಾರ್ಲರ್ ಗಳಲ್ಲಿ ಮಾಡುವ ಫೇಶಿಯಲ್ ಗಳ ಪೈಕಿ ಗೋಲ್ಡನ್ ಫೇಶಿಯಲ್ ಅತಿ ಹೆಚ್ಚು ಪರಿಣಾಮ ಬೀರುವಂತದ್ದು. ಇದಕ್ಕೆ ಪಾರ್ಲರ್ ಗಳಲ್ಲಿ ದುಬಾರಿ ದುಡ್ಡು ತೆರುವ ಬದಲು ಮನೆಯಲ್ಲೇ ಇದನ್ನು ತಯಾರಿಸಬಹುದು. ಹೇಗೆನ್ನುತ್ತೀರಾ?
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಕಸ್ತೂರಿ ಅರಿಶಿನ ಸೇರಿಸಿ ಗಟ್ಟಿ ಮೊಸರಿನೊಂದಿಗೆ ಬೆರೆಸಿ ಹಚ್ಚಿಕೊಳ್ಳಿ. ಒಂದು ಗಂಟೆ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ ಮಾತ್ರವಲ್ಲ ಮೊಡವೆ ಕಲೆಗಳೂ ದೂರವಾಗುತ್ತವೆ.
ಮುಖದ ಮೇಲಿನ ನೆರಿಗೆಗಳನ್ನೂ ಬಹುಬೇಗ ದೂರಮಾಡುವ ಇದನ್ನು ವಾರದಲ್ಲಿ ಒಂದರಿಂದ ಎರಡು ಬಾರಿ ಹಚ್ಚಿಕೊಳ್ಳಬಹುದು. ಇದು ತ್ವಚೆಗೆ ಮಾಯಿಶ್ಚರೈಸರ್ ನೀಡುತ್ತದೆ. ಮುಖವನ್ನು ಕ್ಲೀನ್ ಮತ್ತು ಫ್ರೆಶ್ ಆಗಿ ಕಾಣುವಂತೆ ಮಾಡುತ್ತದೆ.
ಸಾಮಾನ್ಯ ಅರಿಶಿನಕ್ಕಿಂತ ಕಸ್ತೂರಿ ಅರಿಶಿನ ಬಳಸುವುದು ಬಹಳ ಒಳ್ಳೆಯದು. ಇದು ಮುಖದ ಕಾಂತಿಯನ್ನು ಹೆಚ್ಚಿಸಿ ಗುಳ್ಳೆಗಳಾಗದಂತೆ ನೋಡಿಕೊಳ್ಳುತ್ತದೆ. ಇದು ನಿಮ್ಮ ಮುಖವನ್ನು ಮತ್ತಷ್ಟು ಸುಂದರವಾಗಿಸುತ್ತದೆ.
ಈ ಫೇಶಿಯಲ್ ಮಾಡಿಕೊಂಡ ಒಂದೆರಡು ದಿನಗಳ ಕಾಲ ಮುಖಕ್ಕೆ ಬಿಸಿನೀರು ಮುಟ್ಟಿಸದಿರಿ. ಸೋಪು ಕೂಡಾ ಬಳಸದಿರಿ. ಫೇಸ್ ವಾಶ್ ನಾಲ್ಕು ದಿನ ಬಳಸದಿರುವುದು ಒಳ್ಳೆಯದು.