ನೈಸರ್ಗಿಕವಾದ, ಆಕರ್ಷಕವಾಗಿ ಕಾಣುವ ಬಣ್ಣಗಳ ಲಿಪ್ ಸ್ಟಿಕ್ ಅನ್ನು ಮನೆಯಲ್ಲೇ ತಯಾರಿಸುವ ಸರಳ ವಿಧಾನ ಇಲ್ಲಿದೆ. ಬೆಣ್ಣೆ ಅಥವಾ ಶಿಯಾ ಬೆಣ್ಣೆ, ಬಾದಾಮಿ, ಮಾವು ಅಥವಾ ಅವಕಾಡೊವನ್ನು ಇದಕ್ಕಾಗಿ ಬಳಸಬಹುದು.
ಇದು ಒಂದು ಚಮಚದಷ್ಟಿರಲಿ. ಇದಕ್ಕೆ ಜೇನು ಮೇಣ, ಆಲಿವ್ ಇಲ್ಲವೇ ಬಾದಾಮಿ ತೈಲ ತಲಾ ಒಂದು ಚಮಚದಷ್ಟು ಬೆರೆಸಿ. ಎಲ್ಲವನ್ನೂ ಮಿಶ್ರಣ ಮಾಡಿಟ್ಯೂಬ್ ಗೆ ಅಂಟಿಸಿ ಮೈಕ್ರೋ ಓವನ್ ನಲ್ಲಿಡಿ. ಬಣ್ಣಗಳ ಆಯ್ಕೆಗೆ ಅಡುಗೆ ಮನೆಗೆ ಹೋದರೆ ಸಾಕು.
ಕಡುಕೆಂಪು ಮತ್ತು ಗುಲಾಬಿ ಬಣ್ಣದ ಲಿಪ್ ಸ್ಟಿಕ್ ಪಡೆಯಲು ಬೀಟ್ ರೂಟ್ ಬಳಸಿ. ಕೆಂಗಂದು ಬಣ್ಣ ಪಡೆಯಲು ನೀವು ದಾಲ್ಚಿನಿ ಹುಡಿ ಬಳಸಿದರೆ ಸಾಕು.
ಕಡುಕಂದು ಬಣ್ಣಕ್ಕಾಗಿ ಕೋಕೊ ಪುಡಿ ಬಳಸಿ. ಅರಿಶಿನ ಪುಡಿಯಲ್ಲಿ ತಾಮ್ರದ ಬಣ್ಣ ಬಳಸಿ. ಇದೆಲ್ಲವೂ ನೈಸರ್ಗಿಕ ಉತ್ಪನ್ನವಾಗಿರುವ ಕಾರಣ ಬಣ್ಣ ಸ್ವಲ್ಪ ತಿಳಿಯಾಗಿರಬಹುದು.
ಮೂವತ್ತು ಸೆಕೆಂಡ್ ವಿರಾಮದಲ್ಲಿ ಇದನ್ನು ಮೈಕ್ರೋವೇವ್ ನಲ್ಲಿಟ್ಟು ತೆಗೆಯಿರಿ. ಪ್ರತಿ ಬಾರಿ ಪರೀಕ್ಷಿಸಿ. ಎಲ್ಲವೂ ಸರಿಯಾಗಿ ಕರಗಿದ ಬಳಿಕ ಹೊರತೆಗೆದು ಸರಿಯಾಗಿ ಸೆಟ್ ಮಾಡಿ. ಬಳಿಕ ಬೇಕಿರುವ ರೂಪ ಕೊಟ್ಟು ರಾತ್ರಿ ವೇಳೆ ಫ್ರೀಜರ್ ನಲ್ಲಿಟ್ಟರೆ ಮುಂಜಾನೆ ನಿಮ್ಮ ಲಿಪ್ ಸ್ಟಿಕ್ ತಯಾರಾಗಿರುತ್ತದೆ.