ಐಸ್ ಕ್ರೀಂ ಎಂದರೆ ಯಾರಿಗಿಷ್ಟವಿಲ್ಲ. ಅದು ಅಲ್ಲದೇ ಈಗ ಹೊರಗಡೆಯಿಂದ ತಂದು ತಿನ್ನುವುದಕ್ಕೆ ಆಗುವುದಿಲ್ಲ. ಹಾಗಾಗಿ ಐಸ್ ಕ್ರಿಂ ತಿನ್ನಬೇಕು ಅನಿಸಿದಾಗ ಮನೆಯಲ್ಲಿಯೇ ಮಾಡಿ ಸವಿಯಿರಿ ಸುಲಭವಾದ ಚಾಕೋಲೆಟ್ ಐಸ್ ಕ್ರಿಂ.
ಬೇಕಾಗುವ ಸಾಮಾಗ್ರಿಗಳು:
1/2ಕಪ್ – ಕೋಕೊ ಪೌಡರ್, ½ ಕಪ್ – ಸಕ್ಕರೆ, ¼ ಕಪ್ ಬ್ರೌನ್ ಶುಗರ್, ¾ ಕಪ್ – ಹಾಲು, 1.5 ಕಪ್ – ಕ್ರೀಂ, 1.5 ಟೀ ಸ್ಪೂನ್ – ವೆನಿಲ್ಲಾ ಎಸೆನ್ಸ್, ಚಿಟಿಕೆ – ಉಪ್ಪು.
ಮಾಡುವ ವಿಧಾನ:
ಒಂದು ಬೌಲ್ ಗೆ ಸಕ್ಕರೆ, ಕೋಕೊ ಪೌಡರ್ ಎರಡನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಹಾಲು ಸೇರಿಸಿ ಮತ್ತೊಮ್ಮೆ ಬೀಟ್ ಮಾಡಿಕೊಳ್ಳಿ.
ನಂತರ ಕ್ರೀಂ ಹಾಗೂ ವೆನಿಲ್ಲಾ ಎಸೆನ್ಸ್ , ಚಿಟಿಕೆ ಉಪ್ಪು ಸೇರಿಸಿ ಇದನ್ನು ಒಂದು ಐಸ್ ಕ್ರಿಂ ಮೇಕರ್ ಗೆ ಹಾಕಿ 20 ನಿಮಿಷಗಳ ಕಾಲ ಬೀಟರ್ ನಿಂದ ಬೀಟ್ ಮಾಡಿಕೊಳ್ಳಿ.
ಈ ಮಿಶ್ರಣ ಚೆನ್ನಾಗಿ ಕ್ರಿಂ ನ ಹದಕ್ಕೆ ಬರಲಿ. ನಂತರ ಇದನ್ನು ಒಂದು ಬಾಕ್ಸ್ ಗೆ ಹಾಕಿ 6 ಗಂಟೆಗಳ ಕಾಲ ಫ್ರೀಜರ್ ನಲ್ಲಿಡಿ. ರುಚಿಕರವಾದ ಚಾಕೋಲೇಟ್ ಐಸ್ ಕ್ರೀಂ ಸವಿಯಲು ರೆಡಿ.