ಮಳಿಗೆಗಳಲ್ಲಿ ಸಿಗುವ ರಾಸಾಯನಿಕ ಬ್ಲೀಚ್ ಬಳಸಲು ಹೆದರುತ್ತೀರಾ….? ಮನೆಯಲ್ಲೇ ನೈಸರ್ಗಿಕ ಬ್ಲೀಚ್ ಗಳನ್ನು ಹೇಗೆ ತಯಾರಿಸಬಹುದು ನೋಡೋಣ.
ಒಂದು ಬಟ್ಟಲಿನಲ್ಲಿ ಅಲೋವೇರದ ಲೋಳೆಯನ್ನು ತೆಗೆದಿಟ್ಟುಕೊಳ್ಳಿ. ಬಳಿಕ ಅಕ್ಕಿ ಹಿಟ್ಟು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿ. ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದು ಒಣಗಿಸಿ. ಮುಖ ಮತ್ತು ಕತ್ತಿನ ಮೇಲೆ ಹಚ್ಚಿ. 25 ನಿಮಿಷಗಳ ಬಳಿಕ ಸ್ವಚ್ಛವಾಗಿ ತೊಳೆಯಿರಿ. ಎರಡು ವಾರಗಳಿಗೊಮ್ಮೆ ಇದನ್ನು ಪುನರಾವರ್ತಿಸಿ.
ಕಡಲೆಹಿಟ್ಟಿಗೆ ನಿಂಬೆ ಜ್ಯೂಸ್ ಬೆರೆಸಿಯೂ ಬ್ಲೀಚ್ ತಯಾರಿಸಬಹುದು. ಒಂದು ಚಮಚ ಕಡಲೆ ಹಿಟ್ಟಿಗೆ ಎರಡು ಚಮಚ ತಾಜಾ ನಿಂಬೆರಸ ಬೆರೆಸಿ ಪೇಸ್ಟ್ ತಯಾರಿಸಿ. ಮೊದಲಿನಂತೆ ಮುಖ ಸ್ವಚ್ಛವಾಗಿ ತೊಳೆದು ಒರೆಸಿ. ಪೇಸ್ಟ್ ಅನ್ನು ಮುಖ ಹಾಗೂ ಕುತ್ತಿಗೆಗೆ ವೃತ್ತಾಕಾರದಲ್ಲಿ ಹಚ್ಚಿ. 20 ನಿಮಿಷ ಬಿಟ್ಟು ತೊಳೆಯಿರಿ.
ಕಡಲೆ ಹಿಟ್ಟು ಡ್ರೈ ಅಗಿರುವುದರಿಂದ ಇದರೊಂದಿಗೆ ಗುಲಾಬಿ ಜಲ ಅಥವಾ ಮಾಯಿಸ್ಚರೈಸರ್ ಕ್ರೀಮ್ ಬೆರೆಸಿ. ವಾರಕ್ಕೊಮ್ಮೆ ಇದನ್ನು ಪುನರಾವರ್ತಿಸಿ. ಇದರಿಂದ ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗುವುದನ್ನು ಕಾಣಿರಿ.