ಉಗುರುಗಳನ್ನು ಕತ್ತರಿಸಿ ಅದನ್ನು ಶುಚಿಯಾಗಿ, ಆಕರ್ಷಕವಾಗಿ ಇಡುವುದು ಒಂದು ಕಲೆ. ಇಲ್ಲಿ ನಾವು ಬಿಳಿ ಬಣ್ಣದ ಉಗುರಿನ ಸೌಂದರ್ಯ ಪಡೆಯುವುದು ಹೇಗೆ ಅಂತ ವಿವರಿಸಿದ್ದೇವೆ ನೋಡಿ.
* ಎರಡು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರು ಹಾಗೂ ಅದಕ್ಕೆ 1 ಚಮಚ ಉಪ್ಪು ಹಾಕಿ ಆ ನೀರಿನಲ್ಲಿ ಕೈಯನ್ನು ಇಳಿಬಿಟ್ಟು 10 ನಿಮಿಷ ರಿಲ್ಯಾಕ್ಸ್ ಆಗಿ. ಕಾಲನ್ನು ಬಕೆಟ್ ನೀರಿನಲ್ಲಿ ಇಳಿಬಿಟ್ಟು ಕೂರಿ.
* ನಂತರ ನಿಂಬೆ ಹಣ್ಣಿನಿಂದ ಉಗುರುಗಳನ್ನು ತಿಕ್ಕಿ, ನಂತರ ಮತ್ತೆ ಉಗುರು ಬೆಚ್ಚಗಿನ ನೀರಿನಲ್ಲಿ ಕೈ ಮತ್ತು ಕಾಲುಗಳನ್ನು ತೊಳೆಯಿರಿ.
* ನಂತರ ಟವಲ್ ನಿಂದ ಉಗುರುಗಳನ್ನು ಒರೆಸಿ, ನಂತರ ಉಗುರಿಗೆ ಶೇಪ್ ಕೊಡಿ.
* ಅದಾದ ನಂತರ ಉಗುರನ್ನು ಆಲೀವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ, ಹರಳೆಣ್ಣೆಯಿಂದ ಮಸಾಜ್ ಮಾಡಿ. ಇಷ್ಟು ಮಾಡಿದರೆ ಉಗುರುಗಳು ಶೈನಿಯಾಗಿರುತ್ತದೆ.
* ಉಗುರಿಗೆ ಉತ್ತಮ ಗುಣ ಮಟ್ಟದ ನೇಲ್ ಪಾಲಿಷ್ ಹಚ್ಚಿ. ಅಲ್ಲದೆ ನೇಲ್ ಪಾಲಿಷ್ ಹಚ್ಚುವ ಮುನ್ನ ಪ್ರೀಮಿಯರ್ ಅಥವಾ ಬೇಸ್ ಕೋಟ್ ಹಚ್ಚಿ.
* ಆಗಾಗ ನೇಲ್ ಪಾಲಿಷ್ ಗೆ ಬ್ರೇಕ್ ಕೊಟ್ಟು ನೈಸರ್ಗಿಕವಾಗಿ ಇರಿ.