
ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು ಎಲ್ಲರೂ ಇಷ್ಟಪಡ್ತಾರೆ. ಹತ್ತಾರು ಬಗೆಯ ಮೇಲೋಗರಗಳನ್ನು ಮಾಡಿಕೊಂಡು ನಾವು ಮಾವನ್ನು ಸೇವಿಸುತ್ತೇವೆ. ಕೆಲವೊಮ್ಮೆ ಮಾವಿನ ಕಾಯಿಯ ಪನ್ನಾ ಮಾಡಿ ಕುಡಿದ್ರೆ, ಕೆಲವೊಮ್ಮೆ ಮಾವಿನ ಹಣ್ಣಿನ ಜ್ಯೂಸ್ ಸೇವಿಸುತ್ತೇವೆ.
ನೀವು ವ್ಯಾಯಾಮ ಮತ್ತು ಜಿಮ್ ಮಾಡಿದ ನಂತರ ಕೂಡ ಮಾವಿನ ಹಣ್ಣನ್ನು ತಿನ್ನಬಹುದು. ಅದು ಕೂಡ ಸಂಪೂರ್ಣ ವಿಭಿನ್ನವಾದ ರೀತಿಯಲ್ಲಿ. ಈ ಮ್ಯಾಂಗೋ ಪ್ರೋಟೀನ್ ಶೇಕ್ ತುಂಬಾನೇ ಆರೋಗ್ಯಕರ ಮತ್ತು ರುಚಿಕರವಾಗಿರುತ್ತದೆ.
ಮಾವಿನ ಹಣ್ಣಿನಲ್ಲಿ ಸಾಕಷ್ಟು ವಿಟಮಿನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಪ್ರೋಟೀನ್ ಶೇಕ್‌ನಲ್ಲಿರುವ ಬಾದಾಮಿ ಮತ್ತು ಹಾಲು ಸಹ ಆರೋಗ್ಯಕ್ಕೆ ಪ್ರಯೋಜನಕಾರಿ. ಮಾವಿನ ಹಣ್ಣಿನಿಂದ ಪ್ರೊಟೀನ್ ಶೇಕ್ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮ್ಯಾಂಗೊ ಪ್ರೊಟೀನ್ ಶೇಕ್ ಮಾಡುವ ವಿಧಾನ: ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ 4-5 ಬಾದಾಮಿಯನ್ನು ಕೂಡ ಪುಡಿ ಮಾಡಿಕೊಳ್ಳಿ. ಕತ್ತರಿಸಿದ ಮಾವಿನಹಣ್ಣು ಮತ್ತು ಬಾದಾಮಿ ಪುಡಿಯನ್ನು ಸೇರಿಸಿ ಒಟ್ಟಿಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಅದನ್ನು ಮತ್ತೆ ರುಬ್ಬಿ. ಇದರಿಂದ ಸಕ್ಕರೆ ಕೂಡ ಚೆನ್ನಾಗಿ ಮಿಕ್ಸ್ ಆಗುತ್ತದೆ. ಈ ಮಿಶ್ರಣಕ್ಕೆ 1 ಚಮಚ ಪನೀರ್ ಬಟರ್ ಹಾಗೂ 2 ಕಪ್ ಹಾಲು ಸೇರಿಸಿ ಚೆನ್ನಾಗಿ ಬೀಟ್ ಮಾಡಿದರೆ ಮ್ಯಾಂಗೋ ಪ್ರೋಟೀನ್ ಶೇಕ್ ರೆಡಿ. ತಣ್ಣಗೆ ಕುಡಿಯಬೇಕೆಂದಿದ್ದರೆ ಐಸ್ ಕ್ಯೂಬ್ ಹಾಕಿಕೊಳ್ಳಬಹುದು. ಅಥವಾ ಸ್ವಲ್ಪ ಹೊತ್ತು ಫ್ರಿಡ್ಜ್ ನಲ್ಲಿಟ್ಟು ನಂತರ ಸೇವಿಸಿ.