ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ತಯಾರಿಸಲು ಬಹಳಷ್ಟು ಸಮಯ ಬೇಕು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದರ ಹೊರತಾಗಿ ಮನೆಯಲ್ಲಿಯೇ ಸುಲಭವಾಗಿ ದಿಢೀರ್ ಮುರುಕು ತಯಾರಿಸಬಹುದು. ಅದಕ್ಕೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು ಮನೆಯಲ್ಲಿ ಇದ್ದರೆ ಸಾಕು. ಇಲ್ಲಿದೆ ದಿಢೀರ್ ಮುರುಕು ತಯಾರಿಸುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಅಕ್ಕಿ ಹಿಟ್ಟು – 1 ಲೋಟ
ಕಡಲೆಹಿಟ್ಟು – 1 ಲೋಟ
ಬಿಸಿಮಾಡಿ ಕರಗಿಸಿ ತುಪ್ಪ – 1 ಸೌಟು
ಜೀರಿಗೆ ಪುಡಿ – 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಅಕ್ಕಿಹಿಟ್ಟು, ಕಡಲೆಹಿಟ್ಟು, ತುಪ್ಪ, ಜೀರಿಗೆ ಪುಡಿ, ಉಪ್ಪು ಎಲ್ಲವನ್ನು ಸೇರಿಸಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಕಲಸಿದ ಮಿಶ್ರಣವನ್ನು ಎರಡು ಗಂಟೆಗಳ ಕಾಲ ಹಾಗೆ ನೆನೆಯಲು ಬಿಡಬೇಕು.
ನಂತರ ಚಕ್ಕುಲಿ ಒರಳಿಗೆ ಮುರುಕಿನ ಬಿಲ್ಲೆ ಹಾಕಿ ಹಿಟ್ಟು ಹಾಕಿ ಉದ್ದುದ್ದಕ್ಕೆ ಒತ್ತಬೇಕು. ನಂತರ ಎಣ್ಣೆ ಕಾಯಲು ಇಟ್ಟು ಸಣ್ಣ ಉರಿಯಲ್ಲಿ ಉದ್ದುದ್ದ ಮುರುಕು ಕರಿದರೆ ತಿನ್ನಲು ರುಚಿಯಾಗಿರುತ್ತದೆ.