ಪಿಜ್ಜಾ ಎಂದರೆ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಬಲು ಪ್ರಿಯ ಆಹಾರ. ಪ್ರತಿ ಬಾರಿ ಅಂಗಡಿಯಿಂದ ತರುವ ಬದಲು ಕೆಲವೊಮ್ಮೆ ನೀವಿದನ್ನು ಮನೆಯಲ್ಲೆ ಮಾಡಲು ಪ್ರಯತ್ನಿಸಬಹುದು. ಹೀಗೆ ತಯಾರಿಸುವಾಗ ಈ ಟಿಪ್ಸ್ ಗಳನ್ನು ಅನುಸರಿಸಿ.
ಪಿಜ್ಜಾ ತಯಾರಿಗೆ ಫ್ರಿಜ್ ನಲ್ಲಿಟ್ಟ ಹಿಟ್ಟಿನ ಬಳಕೆ ಬೇಡ. ಮಕ್ಕಳು ಹೇಗಿದ್ದರೂ ಪಿಜ್ಜಾ ಇಷ್ಟಪಟ್ಟು ಸವಿಯುತ್ತಾರೆ. ಹಾಗಾಗಿ ಅದರ ಮೇಲೆ ತರಕಾರಿಗಳು ಬರುವಂತೆ ನೋಡಿಕೊಳ್ಳಿ. ತಾಜಾ ಪಾಲಕ್, ಟೊಮೆಟೊ ಮತ್ತು ಕೋಸುಗಡ್ಡೆಗಳು ಇರಲಿ.
ಹಿಟ್ಟನ್ನು ನಾದಿಕೊಳ್ಳುವ ರೀತಿಯೇ ನಿಮ್ಮ ಪಿಜ್ಜಾದ ರುಚಿ ಹಾಗೂ ಆಕಾರವನ್ನು ನಿರ್ಧರಿಸುತ್ತದೆ. ಹುದುಗುವಿಕೆ ನಿಧಾನವಾಗಿದ್ದಷ್ಟು ಒಳ್ಳೆಯದು. ಇದರಿಂದ ಜೀರ್ಣಕ್ರಿಯೆಯೂ ಸುಲಭವಾಗುತ್ತದೆ. ಸಂಸ್ಕರಿಸಿದ ಚೀಸ್ ಬಳಸುವುದು ಅಷ್ಟು ಒಳ್ಳೆಯದಲ್ಲ.
ಪಿಜ್ಜಾವನ್ನು ಓವನ್ ನಲ್ಲಿ ಕಾಯಿಸುವ ಮೊದಲು ಕಾವಲಿಯಲ್ಲಿ ಕಾಯಿಸಿಕೊಳ್ಳಿ. ಅದಕ್ಕೆ ಬಳಸುವ ಟೊಮೆಟೊ ಸಾಸ್ ನಿಂದ ಹಿಡಿದು ಚೀಸ್ ತನಕ ಪ್ರತಿಯೊಂದು ಉತ್ತಮ ಗುಣಮಟ್ಟದ್ದು ಎಂಬುದನ್ನು ಖಚಿತಪಡಿಸಿಕೊಳ್ಳಿ.