ಸುಂದರ ಹಲ್ಲುಗಳು ಮುಖದ ಅಂದ ಹೆಚ್ಚಿಸುತ್ತದೆ. ಯಾವುದೇ ಆಹಾರದ ಸ್ವಾದ ಸವಿಯಬೇಕೆಂದರೆ ಹಲ್ಲಿನ ಆರೋಗ್ಯ ಬಹಳ ಮುಖ್ಯ. ಹಲ್ಲಿನ ನೋವು ಬಹಳ ತ್ರಾಸ ಕೊಡುವಂಥದ್ದು ಹಾಗಾಗಿ ಹಲ್ಲಿನ ಸ್ವಚ್ಛತೆ ಬಗ್ಗೆ ಗಮನ ಹರಿಸುವುದು ಬಹಳ ಅವಶ್ಯಕ.
ಮಾರುಕಟ್ಟೆಯಲ್ಲಿ ಅನೇಕ ಬಗೆಯ ದುಬಾರಿ ಟೂಥ್ ಪೇಸ್ಟ್, ಮೌತ್ ವಾಷ್ ಗಳು ಲಭ್ಯವಿದ್ದು ಹಲ್ಲಿನ ಕುಳಿ ನಿವಾರಣೆಯ ಭರವಸೆ ನೀಡುತ್ತದೆ. ಆದರೆ ಮನೆಯಲ್ಲೇ ತಯಾರು ಮಾಡಬಹುದಾದ ಈ ಮೌತ್ ವಾಷ್ ದಂತ ಕ್ಷಯದ ವಿರುದ್ಧ ಹೋರಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ಪುರಾತನ ಕಾಲದಿಂದಲೂ ಬೇವಿನ ಕಡ್ಡಿ, ಬೇವಿನ ಎಲೆಗಳನ್ನು ಹಲ್ಲಿನ ಸ್ವಚ್ಛತೆಗೆ ಬಳಸಲಾಗುತ್ತಿದ್ದು ಇದರ ಜೊತೆಗೆ ಲವಂಗ ಕೂಡ ಹಲ್ಲು ನೋವು ಇದ್ದಾಗ ಅದರ ನಿವಾರಣೆಗೆ ಉಪಯೋಗಿಸಲಾಗುತ್ತದೆ. ಮನೆಯಲ್ಲೇ ಮಾಡಬಹುದಾದ ಮೌತ್ ವಾಷ್ ತಯಾರು ಮಾಡಲು ಹಸಿ ಅಥವಾ ಒಣಗಿದ 4-5 ಬೇವಿನ ಎಲೆಗಳು, 4-5 ಲವಂಗ ಹಾಗೂ ಸ್ವಲ್ಪ ಕಲ್ಲುಪ್ಪು ಇಷ್ಟನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ, ಶೋಧಿಸಿ ಈ ನೀರನ್ನು ರಾತ್ರಿ ಮಲಗುವ ಮುನ್ನ ಬಾಯಿಯಲ್ಲಿ ಹಾಕಿ ಮುಕ್ಕಳಿಸಿದರೆ ಹಲ್ಲುಗಳ ಆರೋಗ್ಯಕ್ಕೆ ಬಹಳ ಉಪಯೋಗಕಾರಿಯಾಗಿದೆ.