ಪಾತ್ರೆ ತೊಳೆಯುವುದಕ್ಕೆ ಇಂದು ನಾನಾ ರೀತಿಯ ಸೋಪ್, ಲಿಕ್ವಿಡ್ ಗಳು ಇವೆ. ಇದಕ್ಕೆಲ್ಲಾ ಕೆಮಿಕಲ್ ಉಪಯೋಗಿಸಿ ತಯಾರಿಸುತ್ತಾರೆ. ನಾವೇ ಮನೆಯಲ್ಲಿ ನೈಸರ್ಗಿಕವಾಗಿ ಲಿಕ್ವಿಡ್ ಗಳನ್ನು ತಯಾರಿಸಿದರೆ ಖರ್ಚು ಕಡಿಮೆ ಆರೋಗ್ಯಕ್ಕೂ ಒಳ್ಳೆಯದು.
20 ನೊರೆಕಾಯಿ (ಸೋಪ್ ನಟ್) ಒಂದು ಬೌಲ್ ಗೆ ನೀರು ಹಾಕಿ ರಾತ್ರಿ ಇದನ್ನು ನೆನೆಸಿಡಿ ಬೆಳಿಗ್ಗೆ ಇದರ ಬೀಜ ತೆಗದು ಸಿಪ್ಪೆ ಮಾತ್ರ ಇಟ್ಟುಕೊಳ್ಳಿ. ಮೋಸಂಬಿ, ಲಿಂಬೆಹಣ್ಣಿನ ತುಂಡುಗಳನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು-2 ಕಪ್, ½ ಕಪ್- ಕಲ್ಲುಪ್ಪು, ½ ಕಪ್ –ವಿನೇಗರ್.
ಒಂದು ಕುಕ್ಕರ್ ಗೆ ಲಿಂಬೆ, ಮೋಸಂಬಿ ತುಂಡು, ಜತೆಗೆ ನೆನೆಸಿಟ್ಟುಕೊಂಡ ನೊರೆಕಾಯಿ, ಉಪ್ಪು ಹಾಕಿ ಇದಕ್ಕೆ 1 ಕಪ್ ನೀರು ಸೇರಿಸಿ 4 ವಿಷಲ್ ಕೂಗಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಕುಕ್ಕರ್ ನಲ್ಲಿ ಬೇಯಿಸಿಟ್ಟುಕೊಂಡ ಮಿಶ್ರಣವನ್ನು ಹಾಕಿ ನಂತರ ವಿನೇಗರ್ ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ 2 ಕಪ್ ನೀರು ಸೇರಿಸಿ ಒಂದು ಪಾತ್ರೆಗೆ ಶೋಧಿಸಿಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಗ್ಯಾಸ್ ನಲ್ಲಿಟ್ಟು ಕುದಿಸಿಕೊಳ್ಳಿ. ಇದು ಪೂರ್ತಿ ತಣ್ಣಗಾದ ಮೇಲೆ ಒಂದು ಬಾಟೆಲ್ ಗೆ ಹಾಕಿ ಪಾತ್ರೆ ತೊಳೆಯುವುದಕ್ಕೆ ಉಪಯೋಗಿಸಿ.