ಮನೆಯಲ್ಲೇ ಸಿಗುವ ಹಣ್ಣುಗಳನ್ನು ಉಪಯೋಗಿಸಿ ನೀವು ಸ್ಕ್ರಬ್ ತಯಾರಿಸಬಹುದು, ಮುಖಕ್ಕೆ ಮಸಾಜ್ ಮಾಡಿಕೊಳ್ಳಬಹುದು, ಹೇಗೆನ್ನುತ್ತೀರಾ?
ಸ್ಟ್ರಾಬೆರ್ರಿ ಹಣ್ಣನ್ನು ಕಿವುಚಿ ಒಂದೂವರೆ ಚಮಚ ಸಕ್ಕರೆ ಹಾಕಿ ಅರ್ಧ ಚಮಚ ತೆಂಗಿನೆಣ್ಣೆ ಹಾಕಿ ಮುಖಕ್ಕೆ ಸ್ಕ್ರಬ್ ರೂಪದಲ್ಲಿ ಹಚ್ಚಿ ತಿಕ್ಕಿ. ಇದರಿಂದ ಮುಖದ ಮೇಲಿರುವ ಗುಳ್ಳೆಗಳು ಮಾಯವಾಗುತ್ತವೆ.
ಕಾಫಿ ಹುಡಿಗೆ ತೆಂಗಿನೆಣ್ಣೆ, ಕ್ಯಾಸ್ಟರ್ ಆಯಿಲ್ ಸಮ ಪ್ರಮಾಣದಲ್ಲಿ ಬೆರೆಸಿ ಕೈಗೆ, ಕಾಲಿಗೆ ಹಾಗೂ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಅನಗತ್ಯ ಕೂದಲನ್ನು ತೆಗೆಯಬಹುದು.
ಟೊಮೊಟೊ ಹಣ್ಣಿನ ಒಳ ಭಾಗಕ್ಕೆ ತುಸು ಸಕ್ಕರೆ ಬೆರಸಿ ಕಿವುಚಿಕೊಂಡು ಮುಖಕ್ಕೆ ಸ್ಕ್ರಬ್ ಮಾಡುವುದರಿಂದಲೂ ಮುಖದ ಕಲೆ, ಗುಳ್ಳೆಗಳನ್ನು ಇಲ್ಲವಾಗಿಸಬಹುದು. ಮನೆಯ ಅಡುಗೆ ಮನೆಯಲ್ಲೇ ಸಿಗುವ ಈ ವಸ್ತುಗಳನ್ನು ಬಳಸಿಕೊಂಡು ಸ್ಕ್ರಬ್ ತಯಾರಿಸುವುದೂ ಸುಲಭ. ಪರಿಣಾಮವೂ ಅತ್ಯುತ್ತಮ.