ಮನೆಯಲ್ಲಿಯೇ ಕುಳಿತು ವ್ಯಾಪಾರ ಶುರು ಮಾಡಿ ಹಣ ಗಳಿಸಲು ಬಹುತೇಕರು ಚಿಂತನೆ ನಡೆಸುತ್ತಾರೆ. ಆದರೆ ಕೆಲವೊಂದು ವೆಬ್ ಸೈಟ್ ಅಥವಾ ಮೆಸೇಜ್ ನಂಬಿ ಹಣ ಕಳೆದುಕೊಳ್ಳುವವರೇ ಹೆಚ್ಚು.
ಕಾಲ ಯಾವುದೇ ಇರಲಿ ಬಟ್ಟೆಗೆ ಬೇಡಿಕೆ ಕಡಿಮೆಯಾಗುವುದಿಲ್ಲ. ಹೊಲಿಗೆ ನಿಮಗೆ ಗೊತ್ತಿದ್ದರೆ ಮತ್ತೆ ಆ ಕಲೆಗೆ ಮರುಜೀವ ನೀಡಿ. ಸುಂದರ ಬಟ್ಟೆಗಳನ್ನು ಹೊಲಿದು ಮಾರಾಟ ಶುರು ಮಾಡಿ. ನೀವು ಆನ್ಲೈನ್ ಗಳಲ್ಲಿ ಇದನ್ನು ಮಾರಾಟ ಮಾಡಬಹುದು. ವಾಟ್ಸಾಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಬಹುದು.
ಮರದ ಕೆಲಸ ಗೊತ್ತಿದ್ದವರು ಮರದಿಂದ ಮಕ್ಕಳ ಆಟಿಕೆ ಮಾಡಿ ಹಣ ಗಳಿಸಬಹುದು. ಮಕ್ಕಳ ಮರದ ಆಟಿಕೆಗೆ ಬೇಡಿಕೆಯಿದೆ. ಸಣ್ಣ ಪ್ರಮಾಣದಲ್ಲಿ ಈ ವ್ಯಾಪಾರ ಶುರು ಮಾಡಬಹುದು.
ಕೈಚೀಲಗಳ ಫ್ಯಾಷನ್ ಎಂದಿಗೂ ಹೋಗುವುದಿಲ್ಲ. ವಿಭಿನ್ನ ವಸ್ತುಗಳು ಮತ್ತು ವಿನ್ಯಾಸಗಳೊಂದಿಗೆ ಕೈ ಚೀಲ ತಯಾರಿಸಬಹುದು. ಕೈಚೀಲದಲ್ಲಿ ನೀವು ಬಳಸಿರುವ ಕಲೆ ಆಕರ್ಷಕವಾಗಿದ್ದರೆ ಗಳಿಕೆ ಹೆಚ್ಚಾಗುತ್ತದೆ.
ತಲೆ ಕೂದಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಬೇರೆ ಬೇರೆ ಹೇರ್ ಸ್ಟೈಲ್ ಗಳಿಗೆ ಬೇರೆ ಬೇರೆ ವಸ್ತುಗಳನ್ನು ಬಳಸಲಾಗುತ್ತದೆ. ಹೇರ್ ಬ್ಯಾಂಡ್‌ಗಳು, ಹೇರ್ ಪಿನ್ ಗಳು, ಕ್ಲಿಪ್ ಗಳನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು. ಆನ್ಲೈನ್ ನಲ್ಲಿ ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಲಭ್ಯವಾಗುತ್ತವೆ. ಅದನ್ನು ನೋಡಿ ನೀವು ಕಲಿಯಬಹುದು.
ಹುಡುಗರ ಟೀ ಶರ್ಟ್ ಪ್ಲೇನ್ ಆಗಿದ್ದರೆ ಆಕರ್ಷಕವಾಗಿ ಕಾಣುವುದಿಲ್ಲ. ಟೀ ಶರ್ಟ್ ಮೇಲೆ ಲೋಗೋಗಳಿದ್ದರೆ ಯುವಕರು ಆಕರ್ಷಿತರಾಗ್ತಾರೆ. ಟೀ ಶರ್ಟ್ ಲೋಗೋ ತಯಾರಿಸುವ ಕೆಲಸವನ್ನು ಕೂಡ ನೀವು ಮನೆಯಲ್ಲಿಯೇ ಶುರು ಮಾಡಬಹುದು.
ಗಿಡಗಳ ಮೇಲೆ ಪ್ರೀತಿಯಿದ್ದರೆ ಅದನ್ನು ವ್ಯಾಪಾರವಾಗಿ ಬದಲಿಸಬಹುದು. ಮನೆಯಲ್ಲಿ ಸಸಿಗಳನ್ನು ನೆಟ್ಟು ಮಡಕೆಯಲ್ಲಿ ಅಲಂಕರಿಸಿ. ನಂತರ ಅವುಗಳನ್ನು ಸ್ಥಳೀಯವಾಗಿ ಅಥವಾ ಆನ್‌ಲೈನ್‌ನಲ್ಲಿ ಮಾರಾಟ ಮಾಡಿ.
ಸೆರಾಮಿಕ್ಸ್ ತಯಾರಿಸುವ ಕಲೆಯನ್ನು ಸುಲಭವಾಗಿ ಕರಗತ ಮಾಡಿಕೊಳ್ಳಬಹುದು. ಮನೆಯಲ್ಲಿ ಸುಂದರವಾದ ಸೆರಾಮಿಕ್ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬಹುದು.
ಟೀ ಕಪ್ ಗಳ ಮೇಲೆ ಹುಟ್ಟುಹಬ್ಬದ ಶುಭಾಶಯ, ಫೋಟೋ ಹಾಕಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಿ ನೀವು ಮಾರಾಟ ಮಾಡಬಹುದು.
ಮೊಬೈಲ್, ಟೆಕ್ನಿಕ್ ವಿಷ್ಯದಲ್ಲಿ ಆಸಕ್ತಿ ಹೊಂದಿದ್ದರೆ ಮನೆಯಲ್ಲಿಯೇ ವಿಡಿಯೋ ಗೇಮ್ ಸಿದ್ಧಪಡಿಸಬಹುದು. ಇದನ್ನು ಮಾರಾಟ ಮಾಡಿ ಹಣ ಗಳಿಸಬಹುದು.