ಇದು ಸ್ಟಾರ್ಟ್ ಅಪ್ ಯುಗ. ಬಹುತೇಕರು ತಿಂಗಳ ಸಂಬಳಕ್ಕೆ ಕೈಚಾಚುವ ಬದಲು ತಮ್ಮದೇ ವ್ಯವಹಾರ ಶುರು ಮಾಡಲು ಬಯಸುತ್ತಿದ್ದಾರೆ. ಕಡಿಮೆ ವೆಚ್ಛದಲ್ಲಿ ಮನೆಯಲ್ಲಿಯೇ ಕುಳಿತು ಹೇಗೆ ಕೈತುಂಬಾ ಆದಾಯ ಗಳಿಸಬಹುದು ಎಂದು ಗೂಗಲ್ ನಲ್ಲಿ ಸರ್ಚ್ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಮನೆಯಲ್ಲಿಯೇ ಕುಳಿತು ಬ್ಯುಸಿನೆಸ್ ಶುರುಮಾಡುವವರಿಗೆ ಇಲ್ಲೊಂದು ಒಳ್ಳೆ ಮಾಹಿತಿಯಿದೆ.
ಕೃಷಿ ಭೂಮಿಯಿಲ್ಲದೆ ಕೃಷಿ ಮಾಡಿ ಕೈತುಂಬಾ ಆದಾಯ ಗಳಿಸಬಹುದು. ಇದಕ್ಕೆ ಬೇಕಾಗಿರುವುದು ಟೆರೆಸ್ ಅಥವಾ ಸ್ವಲ್ಪ ಖಾಲಿ ಜಾಗ. ಟೆರೆಸ್ ಬೇಸಾಯ ಉದಯೋನ್ಮುಖ ಪ್ರವೃತ್ತಿಯಾಗಿದೆ. ಇದು ಹಣ ಗಳಿಸಲು ಅವಕಾಶ ಮಾಡಿಕೊಡ್ತಿದೆ. ಇದಕ್ಕೆ ಮಣ್ಣಿನ ಅವಶ್ಯಕತೆಯಿರುವುದಿಲ್ಲ. ನೀರಿನ ಮೂಲಕವೇ ಪೋಷಕಾಂಶವನ್ನು ನೇರವಾಗಿ ಗಿಡಕ್ಕೆ ನೀಡಲಾಗುತ್ತದೆ. ಇದನ್ನು ಹೈಡ್ರೋಪೋನಿಕ್ಸ್ ಎಂದು ಕರೆಯಲಾಗುತ್ತದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ರಣವಿಕ್ರಮ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ವರ್ಷ
ಹೈಡ್ರೋಪೋನಿಕ್ಸ್ ಸೆಟಪ್ ಗೆ ಅನೇಕ ಕಂಪನಿಗಳು ಕೆಲಸ ಮಾಡ್ತಿವೆ. ಹವ್ಯಾಸಿ ತೋಟದಿಂದ ವಾಣಿಜ್ಯ ತೋಟ ಮಾಡಲು ನಿಮಗೆ ಬೇಕಾದ ಎಲ್ಲ ನೆರವನ್ನು ಈ ಕಂಪನಿಗಳು ನೀಡಲಿವೆ. ಎರಡು ಮೀಟರ್ ಎತ್ತರದ ಟವರ್ ನಲ್ಲಿ 35 ರಿಂದ 40 ಗಿಡಗಳನ್ನು ನೆಡಬಹುದು. ತಂತ್ರಜ್ಞಾನವನ್ನು ಸರಿಯಾಗಿ ಬಳಸಿದ್ರೆ ಜನರಿಗೆ ಕೇವಲ ಬೀಜ ಹಾಗೂ ಪೋಷಕಾಂಶಕ್ಕೆ ಮಾತ್ರ ಖರ್ಚು ಬೀಳಲಿದೆ.
ಹವಾಮಾನದಿಂದ ಗಿಡಗಳಿಗೆ ರಕ್ಷಣೆ ನೀಡಲು ನೆಟ್ ಅಥವಾ ಪಾಲಿ ಹೌಸ್ ವ್ಯವಸ್ಥೆ ಮಾಡಬೇಕಾಗುತ್ತದೆ. ದುಬಾರಿ ಹಣ್ಣು ಅಥವಾ ತರಕಾರಿ ಬೆಳೆದು ನೀವು ಹಣ ಗಳಿಸಬಹುದಾಗಿದೆ. Future farms, our agriculture ಸೇರಿದಂತೆ ಅನೇಕ ಕಂಪನಿಗಳು ನಿಮಗೆ ಸಹಾಯ ಮಾಡಲಿವೆ.