ಮನೆಯಲ್ಲಿ ಒಂದೇ ಒಂದು ಜಿರಳೆ ಕಂಡ್ರೂ ಸಾಕು ನಾವು ಕಂಗಾಲಾಗಿ ಹೋಗ್ತೀವಿ. ಜಿರಳೆಗಳ ದಂಡು ಇನ್ನೂ ಎಲ್ಲೆಲ್ಲಿ ಅಡಗಿದೆಯೋ ಅನ್ನೋ ಆತಂಕ ಶುರುವಾಗುತ್ತದೆ. ಆದ್ರೆ ಇದೇ ಜಿರಳೆಗಳಿಂದ ಲಕ್ಷಾಂತರ ರೂಪಾಯಿ ಹಣ ಸಂಪಾದಿಸಬಹುದು ಅಂದ್ರೆ ಹೇಗಿರತ್ತೆ ಹೇಳಿ? ಇಂಥದ್ದೊಂದು ವಿಚಿತ್ರ ಅಫರ್ ಅನ್ನು ಉತ್ತರ ಕೆರೊಲಿನಾ ಮೂಲದ ಕಂಪನಿ ಕೊಟ್ಟಿದೆ.
ಪೆಸ್ಟ್ ಇನ್ಫಾರ್ಮರ್ ಎಂಬ ಈ ಕಂಪನಿ ಹೊಸ ಕೀಟ ನಿಯಂತ್ರಣ ವಿಧಾನವನ್ನು ಪರೀಕ್ಷಿಸಲು ಹೊರಟಿದೆ. ಇದಕ್ಕಾಗಿ ವಿಶೇಷ ಕೊಡುಗೆಯೊಂದನ್ನು ಬಿಡುಗಡೆ ಮಾಡಿದೆ. ನಿಮ್ಮ ಮನೆಯಲ್ಲಿ 100 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೀವು ಜಿರಳೆಗಳನ್ನು ಬಿಟ್ಟುಕೊಳ್ಳಬೇಕು. ಇದಕ್ಕೆ ಪ್ರತಿಯಾಗಿ ಅಮೆರಿಕದ ಈ ಕಂಪನಿ 1.5 ಲಕ್ಷ ರೂಪಾಯಿ ನೀಡುತ್ತದೆ.
ಜಿರಳೆಗಳನ್ನು ತಮ್ಮ ಮನೆಗಳಲ್ಲಿ ಬಿಟ್ಟುಕೊಳ್ಳಲು ಈ ಕಂಪನಿ ಮನೆ ಮಾಲೀಕರಿಗೆ 2,000 ಡಾಲರ್ ಕೊಡ್ತಿದೆ. ಮನೆಗಳಲ್ಲಿ ಜಿರಳೆ ಮುತ್ತಿಕೊಳ್ಳುವಿಕೆ ಹೇಗಿರುತ್ತೆ ಎಂಬುದನ್ನೆಲ್ಲ ಅಧ್ಯಯನ ಮಾಡಲು ಈ ಆಫರ್ ನೀಡಲಾಗ್ತಿದೆ. ಪೆಸ್ಟ್ ಕಂಟ್ರೋಲರ್ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಸ್ತಾಪದ ವಿವರಗಳನ್ನು ಪೋಸ್ಟ್ ಮಾಡಿದ್ದಾರೆ. ಅಮೆರಿಕನ್ ಜಿರಳೆಗಳನ್ನು ಅದರ ಪರಿಣಾಮಕಾರಿತ್ವವನ್ನು ನಿರ್ಧರಿಸಲು ನಿರ್ದಿಷ್ಟ ಕೀಟ ನಿಯಂತ್ರಣ ತಂತ್ರವನ್ನು ಪರೀಕ್ಷಿಸಲು ಬಯಸುವ ಜನರ ಮನೆಗಳಿಗೆ ಅವುಗಳನ್ನು ಬಿಡಲು ಯೋಜನೆ ಸಿದ್ಧಪಡಿಸಲಾಗ್ತಿದೆ.
ಜಿರಳೆ ಬಿಟ್ಟ ಮೇಲೆ 30 ದಿನಗಳ ಕಾಲ ಮನೆಮಾಲೀಕರು ಯಾವುದೇ ಇತರ ಕೀಟ ನಿಯಂತ್ರಣ ತಂತ್ರಗಳನ್ನು ಬಳಸುವಂತಿಲ್ಲ. 30 ದಿನಗಳಲ್ಲಿ ಜಿರಳೆಗಳ ನಿಯಂತ್ರಣ ಸಾಧ್ಯವಾಗದೇ ಇದ್ದರೆ ಬೇರೆ ವಿಧಾನ ಬಳಸುವುದಾಗಿ ಖಾತ್ರಿ ಕೂಡ ನೀಡಿದೆ ಈ ಕಂಪನಿ. ಈ ಆಫರ್ ಪಡೆಯಲು ಇಷ್ಟವಿದ್ದರೆ ನೀವು ಮನೆ ಅಥವಾ ಮನೆಯ ಮಾಲೀಕರ ಲಿಖಿತ ಅನುಮೋದನೆಯನ್ನು ಹೊಂದಿರಬೇಕು.
ಅರ್ಹತೆ ಪಡೆಯಲು ನೀವು 21 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ಅಷ್ಟೇ ಅಲ್ಲ ಕಾಂಟಿನೆಂಟಲ್ ಯುನೈಟೆಡ್ ಸ್ಟೇಟ್ಸ್‌ನ ನಿವಾಸಿಯಾಗಿರಬೇಕು.ಪರೀಕ್ಷಿಸಿದ ಎಲ್ಲಾ ಜಿರಳೆಗಳನ್ನು ಸಾಕಲಾಗುತ್ತದೆ ಮತ್ತು ಸುರಕ್ಷಿತವಾಗಿಡಲಾಗುತ್ತದೆ. ಅಧ್ಯಯನದ ಅವಧಿಯಲ್ಲಿ ನೀವು ಯಾವುದೇ ಹೆಚ್ಚುವರಿ ಜಿರಳೆ ಚಿಕಿತ್ಸೆಯನ್ನು ಪ್ರಯತ್ನಿಸಬಾರದು.
ಅಧ್ಯಯನದ ಕೊನೆಯಲ್ಲಿ, ಜಿರಳೆ ಮುತ್ತಿಕೊಳ್ಳುವಿಕೆಯನ್ನು ತೊಡೆದುಹಾಕದಿದ್ದರೆ, ನಾವು ನಿಮಗೆ ಯಾವುದೇ ವೆಚ್ಚವಿಲ್ಲದೆ ಸಾಂಪ್ರದಾಯಿಕ ಜಿರಳೆ ಚಿಕಿತ್ಸೆಯ ಆಯ್ಕೆಗಳನ್ನು ಬಳಸುತ್ತೇವೆ ಎಂದು ಕಂಪನಿ ಹೇಳಿದೆ. ಈ ಅಧ್ಯಯನದ ಅವಧಿ ಸರಿಸುಮಾರು 30 ದಿನಗಳು. ಒಂದು ತಿಂಗಳು ಜಿರಳೆಗಳ ಕಾಟ ಸಹಿಸಿಕೊಂಡ್ರೆ ಒಂದೂವರೆ ಲಕ್ಷ ರೂಪಾಯಿ ಗಳಿಸಬಹುದು.