ಜಗತ್ತಿನಲ್ಲಿ ಬಡತನ, ಆರ್ಥಿಕ ಸಮಸ್ಯೆಯಿಂದ ಜನರು ಸಾಕಷ್ಟು ಕಷ್ಟಪಡ್ತಾರೆ. ಮನೆಯಲ್ಲಿರುವ ಮುರಿದ, ಹಾಳಾದ ವಸ್ತುಗಳು, ಬಟ್ಟೆ, ಉಪಯೋಗವಿಲ್ಲದ ವಸ್ತು, ಬಟ್ಟೆಗಳು ಬಡತನಕ್ಕೆ ಕಾರಣವಾಗುತ್ತದೆಯಂತೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಅನುಪಯುಕ್ತ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದು ಬಡತನಕ್ಕೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ಜನರು ಹಾಳಾದ, ಅನುಪಯುಕ್ತ ವಸ್ತು ಹಾಗೂ ಬಟ್ಟೆಗಳನ್ನು ಕಪಾಟಿನ ಒಂದು ಮೂಲೆಯಲ್ಲಿ ಇಡ್ತಾರೆ. ಅಥವಾ ಕಪಾಟಿನ ಕೆಳಗಿನ ಸ್ಥಳದಲ್ಲಿ ಇಡುತ್ತಾರೆ. ಇದು ವಾಸ್ತು ಪ್ರಕಾರ ತಪ್ಪು. ಬಡತನಕ್ಕೆ ಇದು ಕಾರಣವಾಗುತ್ತದೆ. ಹರಿದ ಹಾಗೂ ಬಳಕೆಯಾಗದ ಬಟ್ಟೆಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ.
ಬಳಕೆಯಾಗದ ವಸ್ತು, ಬಟ್ಟೆಯನ್ನು ಕಟ್ಟಿ ಮನೆಯಲ್ಲಿ ಇಡುವ ಬದಲು ಅದನ್ನು ದಾನ ಮಾಡಬೇಕು. ವಸ್ತುಗಳನ್ನು ಅಥವಾ ಬಟ್ಟೆಯನ್ನು ಬೇರೆ ಕೆಲಸಕ್ಕೆ ಬಳಸಬೇಕು. ಹರಿದ ಅಂಗಿ, ಬನಿಯನ್ ಬಳಸಬಾರದು. ಹಾಗೆ ಎಂದೂ ಹರಿದ, ಹಾಳಾದ ಬಟ್ಟೆಯನ್ನು ಧರಿಸಬಾರದು. ಇದು ಬಡತನದ ಸಂಕೇತ. ಇಂಥವು ಮನೆಗೆ ಬಡತನ ತರುತ್ತದೆ.