ಪುಟ್ಟ ಮಕ್ಕಳಿಗೆ ಆಟವಾಡಲು ಸ್ಪಟಿಕ ಚಂಡನ್ನು ಕೊಡುತ್ತಾರೆ. ಇದು ನೋಡಲು ಬಹಳ ಸುಂದರವಾಗಿ ಹೊಳೆಯುತ್ತಿರುತ್ತದೆ. ಆದರೆ ಇದನ್ನು ಮನೆಯಲ್ಲಿ ಇಡುವುದು ಒಳ್ಳೆಯದೇ? ಕೆಟ್ಟದೇ? ಎಂಬುದನ್ನು ತಿಳಿದುಕೊಳ್ಳಿ.
ಸ್ಪಟಿಕ ಚೆಂಡು ಮನೆಯಲ್ಲಿದ್ದರೆ ಒಳ್ಳೆಯದು. ಮನೆಯಲ್ಲಿ ಪ್ರತಿದಿನ ಜಗಳ, ಗಲಾಟೆ ನಡೆಯುತ್ತಿರುತ್ತದೆ. ಸದಸ್ಯರ ನಡುವೆ ವೈಮನಸ್ಸು ಬೆಳೆಯುತ್ತದೆ, ಸ್ಪಟಿಕ ಚೆಂಡು ಇಂತಹ ತೊಂದರೆಗಳನ್ನು ನಿವಾರಿಸಲು ಮತ್ತು ಸದಸ್ಯರಲ್ಲಿ ಪರಸ್ಪರ ತಿಳುವಳಿಕೆ ಮೂಡಿಸಲು ಸಹಕಾರಿಯಾಗಿದೆ. ಹಾಗಾಗಿ ಮನೆಯ ಕೋಣೆಯಲ್ಲಿ ಅಥವಾ ಹಾಲ್ ನಲ್ಲಿ ಇದನ್ನಿಡಿ. ಇದು ನಕರಾತ್ಮಕ ಶಕ್ತಿಯನ್ನು ಎಳೆದುಕೊಳ್ಳುತ್ತದೆ.
ಅಲ್ಲದೇ ಸಂಗಾತಿಯೊಂದಿಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಯಾಗುತ್ತಿದ್ದರೆ ಈ ಚೆಂಡನ್ನು ನೀವು ಮಲಗುವ ಕೋಣೆಯಲ್ಲಿ ಇಡಿ. ಇದು ಸಂಬಂಧಗಳನ್ನು ಗಟ್ಟಿಯಾಗಿಸುತ್ತದೆ.