
ಲಿಂಬೆ ಹಣ್ಣನ್ನು ಮನೆಯಲ್ಲಿ ಅಡುಗೆಯಿಂದ ಹಿಡಿದು ಒಂದಿಲ್ಲೊಂದು ಕೆಲಸಕ್ಕೆ ಬಳಸಿಕೊಳ್ಳುತ್ತಲೇ ಇರುತ್ತೇವೆ. ಇದರ ಬೆಲೆ ಕೂಡ ಆಗಾಗ ಏರಿಳಿತವಾಗುತ್ತಿರುತ್ತದೆ. ಹೀಗಾಗಿ ಇದನ್ನು ಮಾರ್ಕೆಟ್ ನಿಂದ ಕೊಂಡು ತಂದು ತಿನ್ನುವುದಕ್ಕಿಂತ ಸ್ವಲ್ಪ ಕಷ್ಟಪಟ್ಟರೆ ನಿಮ್ಮ ಮನೆಯ ಪಾಟ್ ನಲ್ಲಿಯೇ ಸುಲಭವಾಗಿ ಬೆಳೆಸಬಹುದು.
* ಸರಿಯಾದ ಲಿಂಬೆಹಣ್ಣಿನ ಗಿಡವನ್ನು ಆರಿಸಿಕೊಳ್ಳಿ. ಇದರಲ್ಲಿ ನಾನಾ ತಳಿಯ ಗಿಡಗಳಿವೆ. ಕೆಲವು ಎತ್ತರಕ್ಕೆ ಬೆಳೆಯುತ್ತದೆ. ಇನ್ನು ಕೆಲವು ಚಿಕ್ಕದಾಗಿದ್ದು ಬೇಗನೇ ಫಸಲು ಕೊಡುತ್ತದೆ. ಹಾಗಾಗಿ ನರ್ಸರಿಯಲ್ಲಿ ಇದರ ಬಗ್ಗೆ ಸರಿಯಾಗಿ ವಿಚಾರಿಸಿ ತೆಗೆದುಕೊಳ್ಳಿ.
* ಪಾಟ್ ನಲ್ಲಿ ನೀವು ಲಿಂಬೆಹಣ್ಣಿನ ಗಿಡ ಹಾಕುವುದಾದರೆ ಸೂಕ್ತವಾದ ರೀತಿಯ ಪಾಟ್ ತೆಗೆದುಕೊಳ್ಳಿ. ಇದರಿಂದ ಚೆನ್ನಾಗಿ ಲಿಂಬೆಹಣ್ಣು ಬೆಳೆಯಬಹುದು. ಸಿರಾಮಿಕ್ ಪಾಟ್, ಕ್ಲೇ ಪಾಟ್, ಬಾಳಿಕೆ ಬರುವಂತಹ ರೆಡ್ ವುಡ್ ಪಾಟ್ ಗಳನ್ನು ಉಪಯೋಗಿಸಿ.
ಇನ್ನು ಗಿಡಕ್ಕೆ ಚೆನ್ನಾಗಿ ನೀರುಣಿಸುತ್ತಾ ಇರಿ. ಗಿಡದ ಎಲೆಗಳು ಹಳದಿಯಾಗುವುದಕ್ಕೆ ಬಿಡಬೇಡಿ. 6 ಗಂಟೆಗಳ ಕಾಲ ಸೂರ್ಯನ ಬಿಸಿಲು ಲಿಂಬೆಹಣ್ಣಿನ ಗಿಡಕ್ಕೆ ಬೇಕು.
ಹಾಗೇ ಕಾಲಕಾಲಕ್ಕೆ ಅದಕ್ಕೆ ಬೇಕಾದ ಗೊಬ್ಬರವನ್ನು ಹಾಕುತ್ತಾ ಇರಿ. ಇದರಿಂದ ಲಿಂಬೆ ಗಿಡದಲ್ಲಿ ಫಸಲು ಚೆನ್ನಾಗಿ ಬರುತ್ತದೆ.