ಮನೆಯ ನೆಮ್ಮದಿ, ಆರ್ಥಿಕ ಲಾಭ, ಪತಿ – ಪತ್ನಿ ನಡುವೆ ಸಂಬಂಧ ಇವೆಲ್ಲವೂ ಮನೆಯ ವಾಸ್ತುವಿನ ಮೇಲೆ ಅವಲಂಭಿತವಾಗಿರುತ್ತದೆ. ಮನೆಯನ್ನ ವಾಸ್ತು ಪ್ರಕಾರವಾಗಿ ಕಟ್ಟಿದ ಮಾತ್ರಕ್ಕೆ ಎಲ್ಲ ಸಮಸ್ಯೆಯೂ ಬಗೆಹರೀತು ಅಂತಲ್ಲ. ಯಾವ್ಯಾವ ವಸ್ತುಗಳನ್ನ ಎಲ್ಲೆಲ್ಲಿ ಇಡಬೇಕೊ ಅಲ್ಲಿ ಇಟ್ಟರೆ ಮಾತ್ರ ಮನೆಯಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ.
ಆರ್ಥಿಕ ಪ್ರಗತಿ ಚೆನ್ನಾಗಿರದ ಹೊರತು ಮನೆಯಲ್ಲಿ ನೆಮ್ಮದಿ ನೆಲೆಸೋಕೆ ಸಾಧ್ಯವೇ ಇಲ್ಲ. ನೀವು ಕೂಡ ಆರ್ಥಿಕ ಸಂಕಷ್ಟದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಮನೆಯ ನೈಋತ್ಯ ದಿಕ್ಕಿನಲ್ಲಿ ಮಣ್ಣಿನಿಂದ ಮಾಡಲ್ಪಟ್ಟ ಏನಾದರೂ ವಸ್ತುವನ್ನ ಇಡಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ಮೂಲೆಯಂತೆಯೇ ನೈಋತ್ಯ ಮೂಲೆ ಕೂಡ ಪ್ರಥ್ವಿಗೆ ಸಂಬಂಧಿಸಿದೆ. ಹೀಗಾಗಿ ನೀವು ನೈಋತ್ಯ ದಿಕ್ಕಿನಲ್ಲಿ ಮಣ್ಣಿನಿಂದ ಮಾಡಿದ ದೊಡ್ಡ ವಸ್ತುವನ್ನ ಇಟ್ಟಷ್ಟೂ ನಿಮ್ಮ ಮನೆಯಲ್ಲಿ ಲಾಭ ಹೆಚ್ಚಾಗುತ್ತಾ ಹೋಗಲಿದೆ. ಉದಾಹರಣೆಗೆ ನೀವು ದೊಡ್ಡ ಕುಂಡವನ್ನ ಇಡಲು ಬಯಸಿದ್ದರೆ ಅದನ್ನ ನೈಋತ್ಯ ದಿಕ್ಕಿನಲ್ಲಿಡಿ. ಸಣ್ಣ ಮಣ್ಣಿನ ವಸ್ತುವಾದರೆ ಅದನ್ನ ಈಶಾನ್ಯ ದಿಕ್ಕಿನಲ್ಲಿಡಿ. ಇದರಿಂದ ನಿಮಗೆ ಲಾಭ ಸಿಗಲಿದೆ.