ಮನೆಯಲ್ಲಿ ಸುಖ – ಶಾಂತಿ ನೆಲೆಸಬೇಕು ಅಂದರೆ ವಾಸ್ತುಶಾಸ್ತ್ರದ ಪಾತ್ರ ಪ್ರಮುಖವಾಗಿದೆ. ಮನೆಯ ವಾಸ್ತುವಿನಲ್ಲಿ ಕೊಂಚ ಏರುಪೇರಾದರೂ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿಬಿಡುತ್ತೆ. ಇದು ನಿಮ್ಮ ಮನೆಯ ಡೈನಿಂಗ್ ಹಾಲ್ನಲ್ಲಿರುವ ಕನ್ನಡಿಗೂ ಅನ್ವಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಡೈನಿಂಗ್ ಕೋಣೆಯಲ್ಲಿ ಎಷ್ಟು ದೊಡ್ಡ ಕನ್ನಡಿಯನ್ನು ಅಳವಡಿಸುತ್ತೀರೋ ಅಷ್ಟು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.
ಡೈನಿಂಗ್ ಕೋಣೆಯ ಬಲಭಾಗದಲ್ಲಿ ಹಾಗೂ ಡೈನಿಂಗ್ ಟೇಬಲ್ನ ಮುಂಭಾಗದಲ್ಲಿ ಕನ್ನಡಿಯನ್ನು ಅಳವಡಿಸಬೇಕು. ಈ ರೀತಿ ಮಾಡೋದ್ರಿಂದ ಮನೆಯವರ ಆರೋಗ್ಯ ಹಾಗೂ ಮನೆಯ ವಾತಾವರಣ ಒಳ್ಳೆಯ ರೀತಿಯಲ್ಲಿ ಇರುತ್ತೆ ಎನ್ನುತ್ತೆ ವಾಸ್ತು ಶಾಸ್ತ್ರ.
ನಿಮ್ಮ ಮನೆಯ ಅಡುಗೆ ಕೋಣೆ ಪಶ್ಚಿಮದಲ್ಲಿದ್ದರೆ ವೃತ್ತಾಕಾರದ ಕನ್ನಡಿಯನ್ನು ಪೂರ್ವ ದಿಕ್ಕಿನಲ್ಲಿ ಇರಿಸಿ. ಇದರಿಂದ ಅಡುಗೆ ಮನೆಯ ವಾಸ್ತುದೋಷ ಕೂಡ ನಿವಾರಣೆಯಾಗಲಿದೆ.