ಹಣಕಾಸಿನ ಸಮಸ್ಯೆ ಇಲ್ಲದವರು ಯಾರಿದ್ದಾರೆ ಹೇಳಿ…? ಮನೆ ಕಟ್ಟುವುದು, ಮಕ್ಕಳ ಮದುವೆ, ಸಾಲ ಹೀಗೆ ನಾನಾ ರೀತಿಯ ಸಮಸ್ಯೆಗಳಿಗೆ ಹಣವೇ ಪರಿಹಾರ. ಲಕ್ಷ್ಮೀದೇವಿ ಒಲಿದರೆ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ನೆಮ್ಮದಿಯಾಗಿ ಇರಬಹುದು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ.
ಕೆಲವರು ಲಕ್ಷ್ಮೀದೇವಿಯ ಅನುಗ್ರಹಕ್ಕಾಗಿ ಸಾಕಷ್ಟು ಪೂಜೆ, ವ್ರತಗಳನ್ನು ಮಾಡುತ್ತಾರೆ. ಆದರೆ ಏನೇ ಮಾಡಿದರೂ ಅವರ ಕಷ್ಟಗಳು ಬಗೆಹರಿಯುವುದಿಲ್ಲ. ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ಈ ವಿಧಾನವನ್ನು ಅನುಸರಿಸಿ ನೋಡಿ.
ಯಾರ ಮನೆ, ಹಾಗೂ ಮನ ಸ್ವಚ್ಛವಾಗಿರುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎನ್ನುತ್ತಾರೆ. ಲಕ್ಷ್ಮೀದೇವಿ ಕೂಡ ಸ್ವಚ್ಛತೆ ಹಾಗೂ ಭಕ್ತಿ ಇರುವ ಕಡೆ ನೆಲೆಸುತ್ತಾಳಂತೆ. ಹಾಗೇ ಆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ. ಮನೆಯಲ್ಲಿ ಸದಾ ಜಗಳವಾಡುವುದು ಹಾಗೂ ಮನೆಯ ಒಳಗೆ, ಹೊರಗೆ ಸ್ವಚ್ಛತೆ ಕಾಯ್ದುಕೊಳ್ಳದೇ ಇರುವ ಕಡೆ ಮತ್ತಷ್ಟೂ ದಾರಿದ್ರ್ಯ ಬಂದು ವಕ್ಕರಿಸುತ್ತದೆ ಎಂದು ಜೋತಿಷ್ಯ ಪಂಡಿತರು ಹೇಳುತ್ತಾರೆ.