
ಮನೆಯ ಅಲಂಕಾರಕ್ಕಾಗಿ ಮನೆಗೆ ನಾವು ಸಾಕಷ್ಟು ಅಲಂಕಾರಿಕ ವಸ್ತುಗಳನ್ನು ತರ್ತೇವೆ. ಇವುಗಳೆಲ್ಲವೂ ಕೇವಲ ಅಂದಕ್ಕಾಗಿ. ಆದರೆ ಕೆಲವು ವಸ್ತುಗಳನ್ನು ಮನೆಯಲ್ಲಿಡುವುದು ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಶುಭ ಎಂದು ಹೇಳಲಾಗುತ್ತದೆ. ಇವು ಅಂದಕ್ಕಾಗಿ ಮಾತ್ರವಲ್ಲದೆ ಮನೆಯಲ್ಲಿನ ಸಂತೋಷ ಮತ್ತು ಸಮೃದ್ಧಿಗೆ ಕಾರಣವಾಗುತ್ತವೆ.
ಮನೆಯಲ್ಲಿ ಸದಾ ಸಂತೋಷ ಮತ್ತು ಶಾಂತಿ ಇರಲು ಬೆಳ್ಳಿಯ ನವಿಲಿನ ಪ್ರತಿಮೆಯನ್ನು ಮನೆಯಲ್ಲಿಡಬೇಕು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯ ಹೆಚ್ಚಿಸುತ್ತದೆ. ಬೆಳ್ಳಿ ನವಿಲು ಮನೆಗೆ ಮಂಗಳಕರ ಎಂದು ನಂಬಲಾಗಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ.
ಮನೆಯಲ್ಲಿ ಬೆಳ್ಳಿ ನವಿಲಿಡುವುದ್ರಿಂದ ಕೆಲವೇ ದಿನಗಳಲ್ಲಿ ಧನಾತ್ಮಕ ಫಲಿತಾಂಶಗಳು ಗೋಚರಿಸುತ್ತವೆ. ಜೊತೆಗೆ ವೈವಾಹಿಕ ಜೀವನದ ಒತ್ತಡವೂ ದೂರವಾಗುತ್ತದೆ. ಪೂಜೆ ಮಾಡುವ ಸ್ಥಳದಲ್ಲಿ ಬೆಳ್ಳಿ ನವಿಲು ಇಡುವುದರಿಂದ ಹೆಚ್ಚು ಲಾಭ ಸಿಗುತ್ತದೆ.
ಮನೆಯ ಉತ್ತರ ದಿಕ್ಕಿನಲ್ಲಿ ಗಿಳಿಯ ಪ್ರತಿಮೆ ಇಟ್ಟರೆ ಅದು ಮಕ್ಕಳ ಓದು ಹಾಗೂ ಏಕಾಗ್ರತೆ ಹೆಚ್ಚಿಸುತ್ತದೆ. ಗೀಳಿ ಪ್ರೀತಿ, ದೀರ್ಘಾಯುಷ್ಯ ಮತ್ತು ಅದೃಷ್ಟದ ಸಂಕೇತವಾಗಿದೆ. ಮನೆಯಲ್ಲಿ ಅನಾರೋಗ್ಯ, ಹತಾಶೆ ಏಕಾಗ್ರತೆಯ ಕೊರತೆ ಕಾಡದಿರಲು ವರ್ಣರಂಜಿತ ಗಿಳಿಗಳಿದ್ದರೆ ಒಳ್ಳೆಯದು.
ಸಾಮಾನ್ಯವಾಗಿ ಎಲ್ಲಾ ಅಂಗಡಿಗಳಲ್ಲಿಯೂ ಲೋಹದಿಂದ ಮಾಡಿದ ಆಮೆಯ ಪ್ರತಿಮೆ ಸಿಗುತ್ತದೆ. ಇದನ್ನು ಮನೆಯಲ್ಲಿಡುವುದು ಶುಭಕರ. ಆದರೆ ಮನೆಯಲ್ಲಿಡುವಾಗ ಕೇವಲ ಲೋಹದಿಂದ ಮಾಡಿದ ಮೂರ್ತಿಯನ್ನು ಮಾತ್ರ ಇಡಬೇಕು.