ಮುಂಜಾನೆ ಪ್ರತಿಯೊಬ್ಬರ ಮನೆಯಲ್ಲೂ ಲಕ್ಷ್ಮಿದೇವಿಯನ್ನು ಮನೆಗೆ ಆಹ್ವಾನಿಸಲು ಮನೆಯ ಮುಂದೆ ತೊಳೆದು ರಂಗೋಲಿ ಹಾಕುತ್ತೇವೆ. ಆದರೆ ಮಹಿಳೆಯರು ಇಂತಹ ರಂಗೋಲಿಗಳನ್ನು ಮನೆಯಲ್ಲಿ ಹಾಕಿದರೆ ಲಕ್ಷ್ಮಿ ದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳಂತೆ. ಹಾಗಾದ್ರೆ ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.
ಮಹಿಳೆಯರು ಮನೆಯ ಮುಂದೆ ರಂಗೋಲಿ ಹಾಕುವಾಗ ರಂಗೋಲಿ ನಾಲ್ಕು ಕಡೆ 2 ಗೆರೆಗಳನ್ನು ಎಳೆಯಿರಿ. ಇದರಿಂದ ಲಕ್ಷ್ಮಿದೇವಿಯು ಅಷ್ಟದಿಗ್ಬಂಧನಕೊಳಗಾಗಿ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಹಾಗೇ ಮನೆಯ ಮುಂದೆ ನಕ್ಷತ್ರಾಕಾರದ ರಂಗೋಲಿ ಹಾಕಿದರೆ ದುಷ್ಟಶಕ್ತಿಗಳು ಮನೆಯಿಂದ ದೂರವಾಗಿ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ. ಅಲ್ಲದೇ ತುಳಸಿ ಗಿಡದ ಹತ್ತಿರ ಅಷ್ಟದಳಪದ್ಮ ರಂಗೋಲಿಯನ್ನು ಹಾಕಿದರೆ ಲಕ್ಷ್ಮಿ ಮನೆಗೆ ಬಂದು ನೆಲೆಸುತ್ತಾಳಂತೆ.
ಅಷ್ಟೇ ಅಲ್ಲದೇ ಮಹಿಳೆಯರು ಯಾವಾಗಲೂ ರಂಗೋಲಿಯನ್ನು ಮುಂಜಾನೆ ಹಾಕಬೇಕು. ಮನೆಯ ಯಜಮಾನ ಮನೆಯಿಂದ ಹೊರಗೆ ಹೋದ ಮೇಲೆ ರಂಗೋಲಿ ಹಾಕಬಾರದು. ಇದರಿಂದ ಅವರಿಗೆ ಲಕ್ಷ್ಮಿದೇವಿಯ ಕೃಪೆ ಸಿಗುವುದಿಲ್ಲ. ಹಾಗಾಗಿ ಮನೆಯ ಯಜಮಾನ ಮನೆಯಿಂದ ಹೊರಗೆ ಹೋಗುವ ಮೊದಲೇ ರಂಗೋಲಿ ಹಾಕಬೇಕು.