ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಲಕ್ಷ್ಮಿ ಮಹಿಳೆ. ಮನೆಯ ಸುಖ-ಶಾಂತಿಗೆ ಆಕೆ ಮೂಲ ಕಾರಣ. ಸೌಭಾಗ್ಯ ಹಾಗೂ ದುರ್ಭಾಗ್ಯ ಆಕೆ ಮಾಡುವ ಕೆಲಸವನ್ನವಲಂಭಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ ಆಕೆ ನಡೆದುಕೊಂಡಲ್ಲಿ ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಸದಾ ನೆಲೆಸಿರುತ್ತದೆ.
ಹಿಂದೆ ಹೇಳಿದಂತೆ ಮನೆಯ ಸ್ವಚ್ಛತೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮನೆಯ ಯಾವುದೇ ಸ್ಥಳ ಕೊಳಕಾಗಿದ್ದಲ್ಲಿ ಕುಟುಂಬದಲ್ಲಿ ದೌರ್ಭಾಗ್ಯ ಮನೆ ಮಾಡುತ್ತದೆ. ಹಾಗಾಗಿ ಮನೆಯನ್ನು ಸದಾ ಸ್ವಚ್ಛವಾಗಿಡಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ಸ್ವಚ್ಛಗೊಳಿಸಿದ ನಂತ್ರ ತಕ್ಷಣ ಮಹಿಳೆಯರು ಸ್ನಾನ ಮಾಡಬೇಕು. ಸ್ವಚ್ಛತೆ ನಂತ್ರ ಸ್ನಾನ ಮಾಡದೇ ಇರೋದು ವಾಸ್ತು ಶಾಸ್ತ್ರದ ಪ್ರಕಾರ ಅಶುಭ. ಇದ್ರಿಂದ ರೋಗ ಹಾಗೂ ನಕಾರಾತ್ಮಕ ಶಕ್ತಿ ವ್ಯಕ್ತಿಯನ್ನು ಆವರಿಸುತ್ತದೆ.
ಹಿಂದೂ ಧರ್ಮ ಹಾಗೂ ವಾಸ್ತು ಶಾಸ್ತ್ರ ಎರಡರಲ್ಲೂ ಸ್ನಾನ ಮಾಡಿದ ನಂತ್ರ ಆಹಾರ ಸಿದ್ಧಪಡಿಸಬೇಕೆಂದು ಹೇಳಲಾಗಿದೆ. ಹೀಗೆ ಮಾಡಿದಲ್ಲಿ ಆರೋಗ್ಯ ವೃದ್ಧಿಯಾಗುವ ಜೊತೆಗೆ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.
ಆಹಾರ ಸೇವನೆ ಮಾಡುವ ಮೊದಲು ದೇವರಿಗೆ ಅರ್ಪಣೆ ಮಾಡಬೇಕು. ನಂತ್ರ ಆ ಆಹಾರವನ್ನು ಮನೆಯ ಸದಸ್ಯರೆಲ್ಲ ಸೇವನೆ ಮಾಡಬೇಕು.
ಸೂರ್ಯಾಸ್ತದ ನಂತ್ರ ತಲೆ ಬಾಚಿಕೊಳ್ಳುವುದು ಅಶುಭ. ರಾತ್ರಿ ಮಹಿಳೆ ಬಾಚಣಿಕೆ ಹಿಡಿದಲ್ಲಿ ಅದನ್ನು ಅಶುಭವೆಂದು ಪರಿಗಣಿಸಲಾಗಿದೆ.
ಮನೆಯ ಸದಸ್ಯರು ಅದ್ರಲ್ಲೂ ಮಹಿಳೆಯರು ಪದೇ ಪದೇ ಕೋಪ ಮಾಡಿಕೊಂಡಲ್ಲಿ ಮನೆಯಲ್ಲಿ ಅಶಾಂತಿ ಹಾಗೂ ದುರಾದೃಷ್ಟ ಹೆಚ್ಚಾಗುತ್ತದೆ.