ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ಮಾಡ್ತಾರೆ. ಮನೆಯಲ್ಲಿ ದೇವರ ಪೂಜೆ ಮಾಡುವುದರಿಂದ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ವಿಗ್ರಹಗಳನ್ನು ಹಾಗೂ ದೇವರ ಫೋಟೋಗಳನ್ನು ಪೂಜೆ ಮಾಡ್ತಾರೆ. ಆದ್ರೆ ಹಿಂದೂ ಧರ್ಮದ ಪ್ರಕಾರ ಕೆಲವೊಂದು ವಿಗ್ರಹಗಳ ಪೂಜೆ ಮಾಡಬಾರದು.
ಶನಿ ನ್ಯಾಯದ ದೇವರು. ಆತನ ಕಣ್ಣಿನಿಂದ ಪ್ರತಿಯೊಬ್ಬರೂ ತಪ್ಪಿಸಿಕೊಳ್ಳಲು ಪ್ರಯತ್ನಿಸ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಶನಿಯ ಯಾವುದೇ ಮೂರ್ತಿಯನ್ನು ಇಡಬಾರದು.
ಭಗವಂತ ಶಿವನ ನಟರಾಜ ರೂಪದ ಪ್ರತಿಮೆಯನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ನಟರಾಜನ ರೂಪ ವಿನಾಶದ ರೂಪ. ಹಾಗಾಗಿ ಇದು ಮನೆಯಲ್ಲಿರಬಾರದು ಎಂದು ಶಾಸ್ತ್ರ ಹೇಳುತ್ತದೆ.
ದೇವಿ ಲಕ್ಷ್ಮಿ ನಿಂತ ಭಂಗಿಯಲ್ಲಿರುವ ಪ್ರತಿಮೆಯನ್ನು ಎಂದೂ ಇಡಬೇಡಿ. ಯಾವಾಗ್ಲೂ ಮನೆಯಲ್ಲಿ ಕುಳಿತ ಲಕ್ಷ್ಮಿ ಪ್ರತಿಮೆ ಮಾತ್ರ ಇರಬೇಕು.
ಭಗವಂತ ಬೈರವ ಶಿವನ ರೂಪ. ಆದ್ರೆ ಭೈರವನ ಮೂರ್ತಿ ಅಥವಾ ಫೋಟೋವನ್ನು ಎಂದೂ ಮನೆಯಲ್ಲಿಡಬಾರದು.