ದೀಪ ಜ್ಞಾನದ ಸಂಕೇತ. ಅಜ್ಞಾನ, ಕತ್ತಲೆಯನ್ನು ಓಡಿಸಿ ಬೆಳಕು ನೀಡುವ ಶಕ್ತಿ ದೀಪಕ್ಕಿದೆ. ಭಗವಂತನ ತೇಜಸ್ವಿ ರೂಪವೆಂದು ಭಾವಿಸಿ ದೀಪಕ್ಕೆ ಪೂಜೆ ಮಾಡಲಾಗುತ್ತದೆ. ದೀಪವನ್ನು ಬೆಳಗುವಾಗ ಹಾಗೂ ಯಾವ ದಿಕ್ಕಿನಲ್ಲಿ ದೀಪವನ್ನು ಇಡಬೇಕು ಎನ್ನುವ ಅಂಶ ಕೂಡ ಮಹತ್ವ ಪಡೆಯುತ್ತದೆ.
ಎಲ್ಲ ರೀತಿಯ ಪ್ರಗತಿ ಹಾಗೂ ಸಮೃದ್ಧಿಗಾಗಿ ಪ್ರತಿ ದಿನ ತುಪ್ಪದ ದೀಪ ಬೆಳಗಬೇಕು. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೀಪದ ಜ್ವಾಲೆ ಪೂರ್ವ ದಿಕ್ಕಿನಲ್ಲಿರುವಂತೆ ಬೆಳಗಿದ್ರೆ ರೋಗ ದೂರವಾಗುತ್ತದೆ. ಜೊತೆಗೆ ಆಯಸ್ಸು ವೃದ್ಧಿಯಾಗಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
ದೀಪವನ್ನು ಉತ್ತರ ದಿಕ್ಕಿನಲ್ಲಿಟ್ಟರೆ ಧನ ವೃದ್ಧಿಯಾಗುತ್ತದೆ.
ಅಡುಗೆ ಮನೆಯಲ್ಲಿ ಕುಡಿಯುವ ನೀರಿಡುವ ಜಾಗದಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ದುಷ್ಟ ಶಕ್ತಿಗಳ ಪ್ರಭಾವ ಇದರಿಂದ ಕಡಿಮೆಯಾಗುತ್ತದೆ.
ದೀಪಕ್ಕೆ ಪೂಜೆ ಮಾಡಿದ ನಂತ್ರ ಮೊದಲು ದೇವರ ಮನೆಯಲ್ಲಿ ದೀಪವನ್ನಿಡಿ. ನಂತ್ರ ಮನೆಯ ಉಳಿದ ಸ್ಥಳಗಳಲ್ಲಿಡಿ.