¾ ಕಪ್- ಬೆಣ್ಣೆ, 2 ಕಪ್-ಸಕ್ಕರೆ, ಮೊಟ್ಟೆ-3, ಕೆಂಪು ಬಣ್ಣದ ಫುಡ್ ಕಲರ್-3 ಟೇಬಲ್ ಸ್ಪೂನ್, 2 ಟೀ ಸ್ಪೂನ್-ವೆನಿಲ್ಲಾ ಎಸೆನ್ಸ್, 3 ಕಪ್-ಮೈದಾ ಹಿಟ್ಟು, 2.5 ಟೇಬಲ್ ಸ್ಪೂನ್-ಕೊಕೋ ಪೌಡರ್, 1.5 ಕಪ್-ಮಜ್ಜಿಗೆ, 2 ಟೀ ಸ್ಪೂನ್-ವಿನೇಗರ್, 2 ಟೀ ಸ್ಪೂನ್ ಬೇಕಿಂಗ್ ಸೋಡಾ, 3 ಕಪ್-ಕ್ರೀಂ ಚೀಸ್.
ಮಾಡುವ ವಿಧಾನ:
ಒಂದು ದೊಡ್ಡ ಬೌಲ್ ಗೆ ಕ್ರೀಂ, ಸಕ್ಕರೆ, ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಮೊಟ್ಟೆ, ಫುಡ್ ಕಲರ್, ವೆನಿಲ್ಲಾ ಎಸೆನ್ಸ್ ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿಕೊಳ್ಳಿ. ಇನ್ನೊಂದು ಬೌಲ್ ಗೆ ಮೈದಾ ಹಿಟ್ಟು , ಕೊಕೋ ಪೌಡರ್ ಹಾಕಿ. ಮಿಶ್ರಣ ಮಾಡಿಕೊಳ್ಳಿ. ಇದನ್ನು ಬೆಣ್ಣೆಯ ಮಿಶ್ರಣಕ್ಕೆ ಸೇರಿಸಿ. ಸ್ವಲ್ಪ ಸ್ವಲ್ಪ ಮಜ್ಜಿಗೆಯನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಇದನ್ನು ಮಾಡಿಕೊಳ್ಳಿ.
ನಂತರ ಒಂದು ಬೌಲ್ ಗೆ ವಿನೇಗರ್, ಬೇಕಿಂಗ್ ಸೋಡಾ ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂಡ ಬೆಣ್ಣೆಯ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದನ್ನು ಕಪ್ ಕೇಕ್ ಮೌಲ್ಡ್ ಗೆ ಹಾಕಿ ಒವೆನ್ ನಲ್ಲಿ 20 ನಿಮಿಷ ಬೇಯಿಸಿಕೊಳ್ಳಿ. ನಂತರ ಇದು ತಣ್ಣಗಾದ ಮೇಲೆ ಕ್ರೀಂ ಚೀಸ್ ಅನ್ನು ಇದರ ಮೇಲೆ ಹಾಕಿದರೆ ರುಚಿಕರವಾದ ರೆಡ್ ವೆಲ್ವೆಟ್ ಕಪ್ ಕೇಕ್ ರೆಡಿ.