ಮೂರು ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ಆಲೂಗಡ್ಡೆಯನ್ನು ಉದ್ದಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಒಂದು ಬೌಲ್ ನೀರಿಗೆ ಇದನ್ನು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ.
ನಂತರ ಇನ್ನೊಂದು ಪಾತ್ರೆಗೆ ನೀರು ಹಾಕಿ ತೊಳೆದುಕೊಂಡ ಆಲೂಗಡ್ಡೆಯನ್ನು ಹಾಕಿ ಅರ್ಧಗಂಟೆಗಳ ಕಾಲ ನೆನೆಸಿಡಿ. ನಂತರ ಒಂದು ಬಾಣಲೆಗೆ ನೀರು ಹಾಕಿ 1 ಟೀ ಸ್ಪೂನ್ ಉಪ್ಪು ಹಾಕಿ ಗ್ಯಾಸ್ ಮೇಲೆ ಇಡಿ. ಇದು ತುಸು ಕುದಿಯಲು ಆರಂಭಿಸಿದಾಗ ನೆನೆಸಿಟ್ಟುಕೊಂಡ ಆಲೂಗಡ್ಡೆ ಪೀಸ್ ಗಳನ್ನು ಹಾಕಿ 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.
ನಂತರ ಒಂದು ಪಾತ್ರೆಗೆ ನೀರು ಹಾಕಿಕೊಂಡು ಬೇಯಿಸಿಕೊಂಡ ಆಲೂಗಡ್ಡೆಯನ್ನು ಈ ನೀರಿಗೆ ಹಾಕಿಕೊಳ್ಳಿ. 5 ನಿಮಿಷಗಳ ಕಾಲ ಇದನ್ನು ಹಾಗೇಯೇ ಬಿಟ್ಟು ಬಿಡಿ. ನಂತರ ಈ ಆಲೂಗಡ್ಡೆ ಪೀಸ್ ಅನ್ನು ಒಂದು ಬಟ್ಟೆಯ ಮೇಲೆ ಹರವಿಕೊಂಡು ನೀರು ಒಣಗುವವರಗೆ ಹರವಿಕೊಳ್ಳಿ. ನಂತರ ಎಣ್ಣೆ ಕಾದ ಮೇಲೆ ಇದನ್ನು ಹಾಕಿ ಕೆಂಪಗಾಗುವರೆಗೆ ಕರಿಯಿರಿ. ಆಮೇಲೆ ಅದರ ಮೇಲೆ ಸ್ವಲ್ಪ ಉಪ್ಪು, ಖಾರದಪುಡಿ, ಚಾಟ್ ಮಸಾಲ ಹಾಕಿ ಮಿಕ್ಸ್ ಮಾಡಿಕೊಳ್ಳಿ.