ಪಿಜ್ಜಾ ಎಂದರೆ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರ ಬಾಯಲ್ಲೂ ನೀರೂರುತ್ತೆ ಹಾಗಾಗಿ ಮನೆಯಲ್ಲಿಯೇ ಬಿಸಿ ಬಿಸಿ ಪಿಜ್ಜಾ ತಯಾರಿಸಿ ಮನೆಮಂದಿಯೆಲ್ಲಾ ಸವಿಯಬಹುದು.
ಬೇಕಾಗುವ ಸಾಮಾಗ್ರಿಗಳು:
ಮೈದಾ ಹಿಟ್ಟು-1 ½ ಕಪ್ , ಡ್ರೈ ಈಸ್ಟ್-1 ಟೇಬಲ್ ಸ್ಪೂನ್, ಹಾಲು-1/4 ಕಪ್, ನೀರು-1/4 ಕಪ್, ಸಕ್ಕರೆ-1/2 ಟೇಬಲ್ ಸ್ಪೂನ್ ಉಪ್ಪು-3/4 ಟೀ ಸ್ಪೂನ್, ಆಲಿವ್ ಎಣ್ಣೆ-1/8 ಕಪ್. ಈರುಳ್ಳಿ-1/2 , ಟೊಮೆಟೊ-1/2 ಕಪ್ ಕತ್ತರಿಸಿದ್ದು, ಕ್ಯಾಪ್ಸಿಕಂ-1/2 ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಬೇಬಿ ಕಾರ್ನ್-2, ಪನ್ನೀರ್ ಕ್ಯೂಬ್ಸ್-6, ತಂದೂರಿ ಮಸಾಲ ಪೌಡರ್-1/2 ಟೀ ಸ್ಪೂನ್, ಗರಂ ಮಸಾಲ ಪುಡಿ-1/2 ಟೀ ಸ್ಪೂನ್. ಮೊಸರಿಲ್ಲಾ ಚೀಸ್-1/4 ಕಪ್, ಪಿಜ್ಜಾ ಸಾಸ್-1 ½ ಟೇಬಲ್ ಸ್ಪೂನ್.
ಮಾಡುವ ವಿಧಾನ:
ಒಂದು ಬೌಲ್ ಗೆ ಉಗುರುಬೆಚ್ಚಗೆ ಮಾಡಿದ ಹಾಲನ್ನು ಹಾಕಿ ಇದಕ್ಕೆ ನೀರು, ಸಕ್ಕರೆ ಈಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಮೈದಾ ಹಿಟ್ಟು, ಉಪ್ಪು ಹಾಕಿ ನಾದಿಕೊಳ್ಳಿ.ಈ ಹಿಟ್ಟಿನ ಮೇಲೆ ಒಂದು ಒದ್ದೆ ಬಟ್ಟೆ ಮುಚ್ಚಿ 1 ಗಂಟೆಗಳ ಕಾಲ ಹಾಗೆಯೇ ಇಡಿ.
ನಂತರ ಈ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ನಾದಿಕೊಂಡು ದಪ್ಪಗೆ ಲಟ್ಟಿಸಿಕೊಳ್ಳಿ.ಇದರ ತುದಿಯ ಭಾಗವನ್ನು ಚಿಕ್ಕದ್ದಾಗಿ ಮಡಚಿ. ಇದರ ಮೇಲೆ ಪಿಜ್ಜಾ ಸಾಸ್ ಅನ್ನು ಹಚ್ಚಿ. ತರಕಾರಿಯನ್ನು ಇದರ ಮೇಲೆ ನಿಮಗೆ ಹೇಗೆ ಇಷ್ಟನೋ ಹಾಗೇ ಇಟ್ಟುಕೊಳ್ಳಿ. ನಂತರ ತುರಿದ ಚೀಸ್ ಹಾಕಿ.
ಮಸಾಲ ಪೌಡರ್ ಅನ್ನು ಇದರ ಮೇಲೆ ಚಿಮಕಿಸಿ ಹಾಗೇ ಸ್ವಲ್ಪ ಆಲಿವ್ ಎಣ್ಣೆಯನ್ನು ಹಾಕಿ.ಪಿಜ್ಜಾ ಪ್ಯಾನ್ ಗೆ ಸ್ವಲ್ಪ ಆಲಿವ್ ಎಣ್ಣೆಯನ್ನು ಹಚ್ಚಿ ಅದರ ಮೇಲೆ ಈ ಪಿಜ್ಜಾ ಇಟ್ಟು ಒವೆನ್ ನಲ್ಲಿ 15 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ರುಚಿಕರವಾದ ಪಿಜ್ಜಾ ಸವಿಯಲು ಸಿದ್ಧವಾಗುತ್ತದೆ.