ಪಿಜ್ಜಾ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳ ನೆಚ್ಚಿನ ಆಹಾರದಲ್ಲಿ ಇದು ಒಂದು. ಮನೆಯಲ್ಲಿಯೇ ಮಕ್ಕಳಿಗೆ ಬ್ರೆಡ್ ಪಿಜ್ಜಾ ಮಾಡಿಕೊಡಿ. ಇದನ್ನು ತಯಾರಿಸುವುದು ಬಹಳ ಸುಲಭ
ಬ್ರೆಡ್ ಪಿಜ್ಜಾಗೆ ಬೇಕಾಗುವ ಸಾಮಗ್ರಿ :
ಬ್ರೌನ್ ಬ್ರೆಡ್ 4
ಚೀಸ್ : 2
ಕ್ಯಾಪ್ಸಿಕಂ :1/2 ಕಪ್
ಸ್ವೀಟ್ ಕಾರ್ನ್ : 1/2 ಕಪ್
ಪಿಜ್ಜಾ ಸಾಸ್ : ½ ಕಪ್
ಬೆಣ್ಣೆ : 2 ಚಮಚ
ಕರಿಮೆಣಸಿನ ಪುಡಿ : 1/2 ಚಮಚ
ಚಾಟ್ ಮಸಾಲಾ : ½ ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಬಲವಂತವಾಗಿ ಹಿಂದಿ ಹೇರಬೇಡಿ: ತಮಿಳು ಅಧಿಕೃತ ಭಾಷೆಯಾಗಿ ಮಾಡಿ, ನೀಟ್ ರದ್ದುಗೊಳಿಸಿ ಎಂದು ಪ್ರಧಾನಿ ಎದುರಲ್ಲೇ ಸಿಎಂ ಸ್ಟಾಲಿನ್ ಆಗ್ರಹ
ಬ್ರೆಡ್ ಪಿಜ್ಜಾ ಮಾಡುವ ವಿಧಾನ :
ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ, ಅದಕ್ಕೆ ಸ್ವೀಟ್ ಕಾರ್ನ್, ಕರಿಮೆಣಸಿನ ಪುಡಿ, ಚಾಟ್ ಮಸಾಲಾ, ಉಪ್ಪನ್ನು ಹಾಕಿ ಮಿಕ್ಸ್ ಮಾಡಿ. ನಂತ್ರ ಅದನ್ನು ಪ್ರತ್ಯೇಕವಾಗಿಟ್ಟುಕೊಳ್ಳಿ.
ನಂತ್ರ ಪ್ಯಾನ್ ಗೆ ಬೆಣ್ಣೆ ಹಾಕಿ ಬ್ರೌನ್ ಬ್ರೆಡ್ ಬೇಯಿಸಿ. ಬೇಯಿಸಿದ ಬ್ರೆಡ್ ಗೆ ಪಿಜ್ಜಾ ಸಾಸ್ ಹರಡಿ. ಅದ್ರ ಮೇಲೆ ತುರಿದ ಚೀಸ್ ಹಾಕಿ. ಸಣ್ಣ ಉರಿಯಲ್ಲಿ ಬ್ರೆಡ್ ಕೆಳ ಭಾಗವನ್ನು ಬೇಯಿಸಿ. ಇದಾದ ಮೇಲೆ ಗ್ಯಾಸ್ ಬಂದ್ ಮಾಡಿ, ಸ್ವೀಟ್ ಕಾರ್ನ್ ಮಿಶ್ರಣವನ್ನು ಚೀಸ್ ಮೇಲೆ ಹಾಕಿ, ಸರ್ವ್ ಮಾಡಿ.