ಬೆಂಗಾಲಿ ಪುಲಾವ್, ಇದನ್ನು ತುಂಬಾ ಕಡಿಮೆ ಸಾಮಾಗ್ರಿಯಲ್ಲಿ ಬೇಗನೆ ಮಾಡಿಬಿಡಬಹುದು. ಬೆಳಿಗ್ಗಿನ ತಿಂಡಿಗೆ ತುಂಬಾನೇ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
2 ಕಪ್ ಬಾಸುಮತಿ ಅಕ್ಕಿ , 1-ಈರುಳ್ಳಿ ಸಣ್ಣಗೆ ಕತ್ತರಿಸಿಕೊಂಡಿದ್ದು, ಒಂದು ಹಿಡಿ-ಗೋಡಂಬಿ, ಒಂದು ಹಿಡಿ-ದ್ರಾಕ್ಷಿ, 1 ಟೀ ಸ್ಪೂನ್-ಉಪ್ಪು, 2 ಟೀ ಸ್ಪೂನ್-ಸಕ್ಕರೆ, 2 ಟೇಬಲ್ ಸ್ಪೂನ್-ತುಪ್ಪ, 1 ತುಂಡು-ಚಕ್ಕೆ, 4-ಲವಂಗ, 4-ಏಲಕ್ಕಿ, ಚಿಟಿಕೆ-ಕೇಸರಿ ದಳ.
ಮಾಡುವ ವಿಧಾನ:
ಒಂದು ಕುಕ್ಕರ್ ಗೆ ಅಕ್ಕಿ ಹಾಕಿ ಚೆನ್ನಾಗಿ ತೊಳೆದು 3.5 ಕಪ್ ನೀರು ಹಾಕಿ 20 ನಿಮಿಷಗಳ ಕಾಲ ನೆನೆಸಿಡಿ.
ಒಂದು ಪ್ಯಾನ್ ಗೆ ತುಪ್ಪ ಹಾಕಿ ಗ್ಯಾಸ್ ಮೇಲೆ ಇಡಿ ಅದಕ್ಕೆ ಏಲಕ್ಕಿ, ಲವಂಗ, ಚಕ್ಕೆ ಹಾಕಿ ನಂತರ ಈರುಳ್ಳಿ ಹಾಕಿ ಅದು ಕೆಂಪಗಾಗುವವರೆಗೆ ಫ್ರೈ ಮಾಡಿ. ಗೋಡಂಬಿ ಹಾಕಿ ಅದು ಫ್ರೈ ಆಗುತ್ತಲೆ ದ್ರಾಕ್ಷಿ ಹಾಕಿ. ನಂತರ ಗ್ಯಾಸ್ ಆಫ್ ಮಾಡಿ. ಈ ಮಿಶ್ರಣವನ್ನು ಅಕ್ಕಿ ನೆನೆಸಿದ ಕುಕ್ಕರ್ ಗೆ ಹಾಕಿ ಸಕ್ಕರೆ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕೇಸರಿ ದಳ ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿಕೊಳ್ಳಿ.