ಮಕ್ಕಳ ಮನಸ್ಸು ಹಸಿಮಣ್ಣಿನ ಗೋಡೆಯಿದ್ದ ಹಾಗೆ. ನಾವು ಏನು ಹೇಳುತ್ತಿವೋ ಅದು ಅವರ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡು ಕುಳಿತು ಬಿಡುತ್ತದೆ. ನಮ್ಮನ್ನು ನೋಡಿ ಮಕ್ಕಳು ಕಲಿಯುವುದರಿಂದ ಮೊದಲು ನಾವು ಸರಿ ಇರಬೇಕು. ತಂದೆ-ತಾಯಂದಿರೇ ಮಕ್ಕಳ ಎದುರು ಸುಳ್ಳು ಹೇಳುವುದು ಇನ್ನೊಬ್ಬರನ್ನು ಕೆಟ್ಟದ್ದಾಗಿ ನಿಂದಿಸುವುದು ಮಾಡಿದರೆ ಮಕ್ಕಳು ನಮ್ಮನ್ನು ನೋಡಿಯೇ ಕಲಿತುಕೊಳ್ಳುತ್ತಾರೆ.
ಇನ್ನು ಮನೆ ಎಂದ ಮೇಲೆ ಅಲ್ಲಿ ಗಂಡ-ಹೆಂಡತಿ ಜಗಳ ಸರ್ವೇ ಸಾಮಾನ್ಯ. ಆದರೆ ಯಾವುದೇ ಕಾರಣಕ್ಕೂ ಮಕ್ಕಳ ಎದುರು ಜಗಳ ಮಾಡಬೇಡಿ. ಸಿಟ್ಟಿನ ಭರದಲ್ಲಿ ತಂದೆ-ತಾಯಂದಿರು ಏನೇನೋ ಮಾತನಾಡಿ ಬಿಡುತ್ತಾರೆ. ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಇನ್ನು ಮನೆಯಲ್ಲಿರುವವರು ಹಿರಿಯರಿಗೆ ಗೌರವ ಕೊಟ್ಟರೆ ಮಕ್ಕಳು ಕೂಡ ಅದನ್ನು ನೋಡಿ ಕಲಿತುಕೊಳ್ಳುತ್ತಾರೆ. ಮನೆಯೇ ಮೊದಲ ಪಾಠ ಶಾಲೆ ಆಗಿರುವುದರಿಂದ ಮಕ್ಕಳು ಹೊರಗಡೆಗಿಂತ ಮನೆಯಲ್ಲಿಯೇ ಜಾಸ್ತಿ ಕಲಿತುಕೊಳ್ಳುತ್ತಾರೆ. ಒಳ್ಳೆಯದನ್ನೇ ಹೇಳಿಕೊಡುವುದರ ಮೂಲಕ ಅವರಲ್ಲಿ ಸಕರಾತ್ಮಕ ಚಿಂತನೆಗಳು ಹೆಚ್ಚಾಗುತ್ತದೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಆಗುತ್ತಾರೆ.