ದೈನಂದಿಕ ಜೀವನದಲ್ಲಿ ಅನಪೇಕ್ಷಿತ ಘಟನೆಗಳು ನಡೆಯುತ್ತಿದ್ದರೆ ಅದು ದುರಾದೃಷ್ಟದ ಸಂಕೇತ. ಗರುಡ ಪುರಾಣದಲ್ಲಿ ಈ ಬಗ್ಗೆ ಹೇಳಲಾಗಿದೆ. ಯಾವುದು ದುರಾದೃಷ್ಟದ ಸಂಕೇತ ಎಂಬುದನ್ನು ವಿವರಿಸಲಾಗಿದೆ.
ಸುಖ, ಸಮೃದ್ಧಿ ವ್ಯಕ್ತಿಯ ಸಂತಾನ ಮಂದಬುದ್ದಿಯದ್ದಾಗಿದ್ದರೆ ಅದು ದುರ್ಭಾಗ್ಯದ ಸೂಚನೆಯಾಗಿರುತ್ತದೆ.
ಯಾವ ವ್ಯಕ್ತಿಯ ಪತ್ನಿ ಮನೆಗೆ ಬರ್ತಿದ್ದಂತೆ ಕುಟುಂಬಸ್ಥರಲ್ಲಿ ಗಲಾಟೆ, ಸಂಘರ್ಷ ನಡೆದಲ್ಲಿ ಎಂದೂ ಆ ವ್ಯಕ್ತಿಯ ಅದೃಷ್ಟದ ಬಾಗಿಲು ತೆರೆಯಲ್ಲ ಎಂದರ್ಥ.
ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟರೂ ಮತ್ತೆ ಧೂಳು ಬಂದ್ರೆ ಅಲಕ್ಷ್ಮಿ ಆಗಮನವಾಗಲಿದೆ ಎಂದು ತಿಳಿಯಬಹುದು.
ಶಕುನಶಾಸ್ತ್ರದ ಪ್ರಕಾರ ಮನೆಯಲ್ಲಾಗುವ ಕೆಲವೊಂದು ಘಟನೆಗಳು ಕೆಟ್ಟ ಸಮಯ ಬರುತ್ತದೆ ಎಂಬುದರ ಸಂಕೇತ ನೀಡುತ್ತವೆ.
ಮನೆಯಲ್ಲಿ ಕಳ್ಳತನವಾಗುವುದು. ಉಪ್ಪಿರುವ ಪದಾರ್ಥಕ್ಕೆ ಕಪ್ಪು ಇರುವೆಗಳು ಬರುವುದು. ಪದೇ ಪದೇ ಹಾಲು ಉಕ್ಕಿ ನೆಲದ ಮೇಲೆ ಬೀಳುವುದು. ಪದೇ ಪದೇ ಮನೆಯಲ್ಲಿರುವ ಗಡಿಯಾರ ಹಾಳಾಗುವುದು ದೌರ್ಭಾಗ್ಯದ ಸಂಕೇತ.
ಮನೆಗೆ ಬಂದ ಸಂಬಂಧಿಕರು ಬೇಸರಗೊಂಡು ಮನೆಯಿಂದ ವಾಪಸ್ ಹೋಗುವುದು. ಶುಭ ಕಾರ್ಯದ ವೇಳೆ ಮನೆಗೆ ಬರುವ ಮಂಗಳಮುಖಿಯರು ಮುಖ ತಿರುಗಿಸಿಕೊಂಡು ವಾಪಸ್ ಹೋಗುವುದು. ಮನೆಯಲ್ಲಿರುವ ಗಾಜಿನ ಹಾಗೂ ಮಣ್ಣಿನ ಪಾತ್ರೆ ಆಗಾಗ ನೆಲಕ್ಕೆ ಬಿದ್ದು ಒಡೆಯುವುದು. ಶೌಚಾಲಯ ಕ್ಲೀನ್ ಮಾಡಿದ್ರೂ ಗಬ್ಬು ವಾಸನೆ ಬರುವುದು ಎಲ್ಲವೂ ಅಶುಭದ ಸಂಕೇತ.