ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಶುರುವಾಗಲಿದೆ. ಎಲ್ಲರ ಮನೆಯಲ್ಲಿ ಲಕ್ಷ್ಮೀ ಪೂಜೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತೆ. ಮನೆಯಲ್ಲಿ ಧನ ಕನಕದ ಹೊಳೆ ಹರಿಯಲಿ ಅಂತಾ ಲಕ್ಷ್ಮೀ ಪೂಜೆ ಮಾಡಲಾಗುತ್ತೆ. ಈ ರೀತಿ ಲಕ್ಷ್ಮೀ ಪೂಜೆ ಮಾಡೋ ಮುನ್ನ ನೀವು ಕೆಲ ನಿಯಮಗಳನ್ನ ಪಾಲಿಸೋದನ್ನ ಮರೆಯದಿರಿ.
ಲಕ್ಷ್ಮೀ ಎಂದರ ಐಶ್ವರ್ಯದ ಮೂರ್ತಿ ಅಂತಾ ಹೇಳಲಾಗುತ್ತೆ. ಆದರೆ ಪುರಾಣಗಳನ್ನ ಆಧರಿಸಿ ಹೇಳೋದಾದ್ರೆ ಈ ಮಾತು ಪೂರ್ತಿ ಸತ್ಯವಲ್ಲ. ಪುರಾಣದ ಪ್ರಕಾರ ಲಕ್ಷ್ಮೀಯನ್ನ ಸುಖ ಹಾಗೂ ನೆಮ್ಮದಿಯ ಪ್ರತೀಕ ಎನ್ನಲಾಗುತ್ತೆ. ಲಕ್ಷ್ಮೀ ಎಂದರೆ ಲಕ್ಷ್ಯ. ಅಂದ್ರೆ ಗುರಿಯನ್ನ ತಲುಪಲು ನೆರವಾಗೋ ದೇವತೆ.
ಕಮಲದ ಮೇಲೆ ಕುಳಿತಿರೋ ಲಕ್ಷ್ಮೀ ದುರ್ಗಿಯ ಅವತಾರಗಳಲ್ಲೊಂದು ಅಂತಾ ಹೇಳಲಾಗುತ್ತೆ. ಅಲ್ಲದೇ ಶಾಸ್ತ್ರದ ಅನುಸಾರ ಲಕ್ಷ್ಮೀಯ ಸಹೋದರಿ ದರಿದ್ರ. ಇವರಿಬ್ಬರೂ ಒಂದೇ ಕಡೆ ಇರಲ್ಲ. ಲಕ್ಷ್ಮೀ ಇದ್ದಲ್ಲಿ ಸುಖ – ಸಂಪತ್ತು ಇದ್ದರೆ. ಲಕ್ಷ್ಮೀ ಇಲ್ಲದ ಕಡೆ ದರಿದ್ರ ಇರುತ್ತೆ ಅಂತಾ ಹೇಳುತ್ತಾರೆ.
ದೀಪಾವಳಿ ಹಬ್ಬದಲ್ಲಿ ಲಕ್ಷ್ಮೀಯನ್ನ ಆರಾಧಿಸೋ ನೀವು ಪೂಜಾ ಕ್ರಮದಲ್ಲಿ ಕೆಲ ಬದಲಾವಣೆ ಮಾಡಿಕೊಂಡರೆ ನಿಮ್ಮ ಮನೆಯಲ್ಲೂ ಲಕ್ಷ್ಮೀ ಶಾಶ್ವತವಾಗಿ ನೆಲೆಸಲಿದ್ದಾಳೆ. ಪೂಜೆಗೂ ಮುನ್ನ ನಿಮ್ಮ ಮನೆಯನ್ನ ಸಂಪೂರ್ಣ ಸ್ವಚ್ಚ ಮಾಡೋದನ್ನ ಮರೆಯದಿರಿ. ಎಲ್ಲಿ ಕೊಳಕು ಇರುತ್ತೋ ಅಲ್ಲಿ ಲಕ್ಷ್ಮೀ ನೆಲೆಸಲಾರಳು. ಹೀಗಾಗಿ ಮನೆಯನ್ನ ಶುದ್ಧವಾಗಿ ಇಡೋದ್ರ ಜೊತೆಗೆ ಪರಿಮಳಭರಿತವಾಗಿ ಇರುವಂತೆಯೂ ನೋಡಿಕೊಳ್ಳಿ.
ಮನೆಯಲ್ಲಿ ಶಾಂತಿ ಇದ್ದಷ್ಟೂ ಒಳ್ಳೆಯದು ಎನ್ನುತ್ತೆ ಶಾಸ್ತ್ರ, ಹಾಗೂ ಪ್ರತಿ ಅಷ್ಟಮಿಯಂದು 8 ವರ್ಷದೊಳಗಿನ ಕನ್ಯೆಯರಿಗೆ ಭೋಜನ ವ್ಯವಸ್ಥೆ ಮಾಡಿ. ಈ ರೀತಿಯ ಎಲ್ಲಾ ಬದಲಾವಣೆ ಮಾಡೋದ್ರಿಂದ ನಿಮ್ಮ ಮನೆಯಲ್ಲಿ ಅಷ್ಟೈಶ್ವರ್ಯದ ಜೊತೆಗೆ ಶಾಂತಿಯೂ ನೆಲೆಸಿ ಮನೆಯಲ್ಲಿ ಸುಖ ಮನೆ ಮಾಡಲಿದೆ.