ಕಾರು ಯಾವಾಗಲೂ ಫಳ ಫಳ ಹೊಳೆಯುತ್ತ ಸ್ವಚ್ಛವಾಗಿರಬೇಕೆಂದು ಎಲ್ಲರೂ ಆಸೆಪಡುತ್ತಾರೆ. ಆದ್ರೆ ಕೆಲವೊಮ್ಮೆ ಆಕಸ್ಮಿಕವಾಗಿ ಕಾರಿಗೆ ಗೀರು ಬಿದ್ದುಬಿಡುತ್ತದೆ. ಒಮ್ಮೊಮ್ಮೆ ಪುಂಡ ಪೋಕರಿಗಳು ಅಥವಾ ಚಿಕ್ಕ ಮಕ್ಕಳು ಬೇಕಂತಲೇ ಕಾರಿಗೆ ಸ್ಕ್ರಾಚ್ ಮಾಡಬಹುದು.
ಆ ಗೀರುಗಳನ್ನು ತೊಡೆದುಹಾಕಲು ನೀವು ಗ್ಯಾರೇಜ್ ಅಥವಾ ಶೋರೂಮ್‌ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿಲ್ಲ. ಮನೆಯಲ್ಲಿಯೇ ಅದಕ್ಕೆ ಸುಲಭ ಪರಿಹಾರವಿದೆ. ಇದಕ್ಕಾಗಿ ನೀವು ಟೂತ್ಪೇಸ್ಟ್ ಅನ್ನು ಬಳಸಬಹುದು. ಆದರೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಚಿಕ್ಕದಾದ ಗೀರುಗಳನ್ನು ಮಾತ್ರ ಟೂತ್‌ಪೇಸ್ಟ್‌ನಿಂದ ತೆಗೆದು ಹಾಕಬಹುದು. ಬಣ್ಣದ ಮೇಲಿನ ಭಾಗದಲ್ಲಿ ಆದ ಸಣ್ಣ ಗೀರುಗಳನ್ನು ತೆಗೆದುಹಾಕಬಹುದು. ಸ್ಕ್ರಾಚ್ ಆಳವಾಗಿದ್ದರೆ ಅಥವಾ ಬಣ್ಣವನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದರೆ ಟೂತ್‌ಪೇಸ್ಟ್ ಕೆಲಸ ಮಾಡುವುದಿಲ್ಲ.
ಟೂತ್‌ಪೇಸ್ಟ್ ಮರಳು ಕಾಗದದಂತೆ ಕಾರ್ಯನಿರ್ವಹಿಸುತ್ತದೆ ಎಂದು ಯೋಚಿಸಿ. ಅದರೊಳಗಿನ ಸೂತ್ರವು ಸಣ್ಣ ಗೀರುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನೀವು ಸ್ಕ್ರಾಚ್ ಆಗಿರುವ ಜಾಗಕ್ಕೆ ಟೂತ್‌ಪೇಸ್ಟ್ ಅನ್ನು ಅನ್ವಯಿಸಿ ಮತ್ತು ಅದನ್ನು ನಿಧಾನವಾಗಿ ಉಜ್ಜಿ. ಅದು ಆ ಪ್ರದೇಶವನ್ನು ಸ್ವಚ್ಛಗೊಳಿಸುತ್ತದೆ. ಇದರಿಂದಾಗಿ ಅಲ್ಲಿರುವ ಕಾರಿನ ಬಣ್ಣವು ಸರಿಯಾಗಿ ಗೋಚರಿಸುತ್ತದೆ. ಈ ಉದ್ದೇಶಕ್ಕಾಗಿ ನೀವು ಬಿಳಿ ಟೂತ್ಪೇಸ್ಟ್ ಅನ್ನು ಬಳಸಬಹುದು.
ಇದು ಮೇಲ್ಮೈಯನ್ನು ಸ್ವಚ್ಛಗೊಳಿಸುತ್ತದೆ, ಗೀರುಗಳನ್ನು ತೆಗೆದುಹಾಕುತ್ತದೆ. ಮೊದಲು ಸ್ಕ್ರಾಚ್ ಆದ ಕಾರಿನ ಜಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಧೂಳು ಮತ್ತು ಕೊಳೆಯನ್ನು ಕ್ಲೀನ್ ಮಾಡಿಕೊಂಡು ಅಲ್ಲಿ ಟೂತ್‌ಪೇಸ್ಟ್ ಅನ್ನು ಉಜ್ಜಬೇಕು. ಗೀರು ಬಿದ್ದಿದ್ದ ಜಾಗವನ್ನು ಸ್ವಚ್ಛಗೊಳಿಸಿದ ನಂತರ ಮೃದುವಾದ ಬಟ್ಟೆಯಲ್ಲಿ ಸ್ವಲ್ಪ ಟೂತ್‌ಪೇಸ್ಟ್ ತೆಗೆದುಕೊಂಡು ಅದನ್ನು ಸ್ಕ್ರಾಚ್ ಆದ ಜಾಗಕ್ಕೆ ಹಚ್ಚಬಹುದು. ಬಟ್ಟೆಯಿಂದಲೇ ಅದನ್ನು ಉಜ್ಜಿಬಿಡಿ. ಟೂತ್‌ಪೇಸ್ಟ್ ಒಣಗಿ ಹೋಗುವ ಮುನ್ನ ಅದನ್ನು ಒರೆಸಿಬಿಡಿ. ಈ ರೀತಿ ಸುಲಭವಾಗಿ ಸ್ಕ್ರಾಚ್ ಕ್ಲೀನ್ ಆಗಿರುತ್ತದೆ.