ಗಂಗಾ ಜಲ ಪವಿತ್ರವಾದದ್ದು. ಪ್ರತಿಯೊಬ್ಬರ ಮನೆಯಲ್ಲಿಯೂ ಸಾಮಾನ್ಯವಾಗಿ ಗಂಗಾ ಜಲ ಇದ್ದೇ ಇರುತ್ತದೆ. ಮನೆಯಲ್ಲಿ ಎಲ್ಲೆಂದರಲ್ಲಿ ಗಂಗಾ ಜಲ ಇಡುವುದು ಶುಭವಲ್ಲ. ಗಂಗಾ ಜಲ ಇಡಲು ನಿಯಮವಿದೆ. ಸೂಕ್ತ ಸ್ಥಳದಲ್ಲಿ ಗಂಗಾ ಜಲವನ್ನಿಟ್ಟರೆ ಮಾತ್ರ ಶುಭ ಫಲ ಪ್ರಾಪ್ತಿಯಾಗುತ್ತದೆ.
ಮನೆಯ ಕತ್ತಲ ಪ್ರದೇಶದಲ್ಲಿ ಎಂದೂ ಗಂಗಾ ಜಲವನ್ನು ಇಡಬಾರದು. ಮನೆಯ ಕತ್ತಲ ಜಾಗದಲ್ಲಿ ಗಂಗಾ ಜಲವನ್ನಿಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಡುತ್ತದೆ.
ಒಂದೇ ಗಂಗಾ ಜಲದ ಬಾಟಲಿಯನ್ನು ದೀರ್ಘ ಸಮಯದವರೆಗೆ ಇಡಬಾರದು. ಸಮಯ ಸಮಯಕ್ಕೆ ಅದನ್ನು ಬದಲಾಯಿಸುತ್ತಿರಬೇಕು. ಹಾಗೆ ಮಾಡಿದ್ರೆ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಮನೆಯ ವಾತಾವರಣ ಸುಖಕರವಾಗಿರುತ್ತದೆ.
ಗಂಗಾ ಜಲದ ಸಣ್ಣ ಸಣ್ಣ ಉಪಾಯಗಳು ಮನೆಯಲ್ಲಿ ಶುಭ ಫಲ ನೀಡಲು ಸಹಾಯಕ.
ಸೋಮವಾರ ಅಥವಾ ಗುರುವಾರ ತಾಮ್ರ ಅಥವಾ ಬೆಳ್ಳಿ ಪಾತ್ರೆಯಲ್ಲಿ ಹಾಕಿ ಮುಚ್ಚಿಡಿ. ಗಂಗಾ ಜಲ ಆವಿಯಾಗ್ತಿದ್ದರೆ ಮತ್ತಷ್ಟು ಗಂಗಾ ಜಲವನ್ನು ತುಂಬಿಡಿ. ಹೀಗೆ ಮಾಡಿದ್ರೆ ಮನೆಯಲ್ಲಿ ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ.
ಬೆಳಿಗ್ಗೆ ಸ್ನಾನವಾದ ಮೇಲೆ ಹೊಸ್ತಿಲಿಗೆ ಹಾಗೂ ಮನೆಗೆಲ್ಲ ಗಂಗಾ ಜಲವನ್ನು ಹಾಕಿ. ಲಕ್ಷ್ಮಿ ಕೃಪೆ ಪ್ರಾಪ್ತಿಯಾಗುತ್ತದೆ.