ಹಿಂದೆಲ್ಲಾ ವಾರಕ್ಕೆ ಐದು ದಿನ ದುಡಿದರೆ ಮತ್ತೆರಡು ದಿನ ಪತಿ, ಪತ್ನಿ ಮಕ್ಕಳೊಂದಿಗೆ ಹೊರಗೆ ಸುತ್ತಾಡಿ ರಿಲ್ಯಾಕ್ಸ್ ಆಗುವುದಿತ್ತು. ಈಗ ಮನೆಯವರೆಲ್ಲ ಮನೆಯೊಳಗೆ ಬಂಧಿ. ಪರಿಣಾಮ ಬದುಕನ್ನು ಹೇಗೆ ಆಸ್ವಾದಿಸುವುದು ಎಂಬುದೇ ತಿಳಿಯದಾಗಿದೆ.
ಮನೆಯಲ್ಲಿ ಕುಳಿತು ಬೋರ್ ಎನ್ನದಿರಿ. ವೀಕೆಂಡ್ ಗಳಲ್ಲಿ ಮನೆಯಲ್ಲೇ ಕ್ಯಾಂಡಲ್ ಲೈಟ್ ಡಿನ್ನರ್ ನಡೆಸಿ. ನಿಮಗಿಷ್ಟವಾಗುವ ಅಡುಗೆ ಮಾಡಿ. ಜೊತೆಯಲ್ಲಿ ಕುಳಿತು ಊಟ ಮಾಡಿ. ಈ ಹಿಂದೆ ರೆಸ್ಟೋರೆಂಟ್ ಗಳಲ್ಲಿ ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತಾ ಊಟ ಮುಗಿಸಿ.
ʼಜಂಕ್ ಫುಡ್ʼ ಪ್ರಿಯರಿಗೆ ಶಾಕಿಂಗ್ ನ್ಯೂಸ್……!
ಬೆಳಗ್ಗೆದ್ದು ಜೊತೆಯಾಗಿ ವ್ಯಾಯಾಮ ಮಾಡಿ. ವಾರಕ್ಕೊಮ್ಮೆ ಮನೆಯಲ್ಲೇ ಚಲನಚಿತ್ರ ನೋಡುವ ಸನ್ನಿವೇಶ ಸೃಷ್ಟಿಸಿಕೊಳ್ಳಿ. ಪಾಪ್ಕಾರ್ನ್, ಸಾಫ್ಟ್ ಡ್ರಿಂಕ್ಸ್ ರೆಡಿ ಮಾಡಿ ಇಟ್ಟುಕೊಳ್ಳಿ. ಅಮೆಜಾನ್ ನೆಟ್ಫ್ಲಿಕ್ಸ್ ಗಳಲ್ಲಿ ಸಿಗುವ ಚಿತ್ರಗಳನ್ನು ಜೊತೆಯಾಗಿ ಕುಳಿತು ನೋಡಿ ಆನಂದಿಸಿ.
ನಿಮಗೆ ತಿಳಿದಿರಲಿ ʼಪೈನಾಪಲ್ʼ ನ ಹತ್ತು ಹಲವು ಪ್ರಯೋಜನಗಳು
ಇಬ್ಬರೂ ಜೊತೆಯಾಗಿಯೇ ಮನೆ ಸ್ವಚ್ಛಗೊಳಿಸಿ. ಡ್ಯಾನ್ಸ್ ಮಾಡಲು ಕ್ಲಬ್ ಗೆ ಹೋಗಬೇಕೆಂದಿಲ್ಲ. ನಿಮಗಿಷ್ಟದ ಹಾಡು ಪ್ಲೇ ಮಾಡಿ ಟಿವಿಯಲ್ಲಿ ಡ್ಯಾನ್ಸ್ ನೋಡಿಕೊಂಡು ಅದನ್ನೇ ಅನುಕರಿಸಿ. ಗಾರ್ಡನ್ ನಿಂಗೂ ಸ್ವಲ್ಪ ಸಮಯ ಮೀಸಲಿಡಿ.