ಮನೆಯ ವಾಸ್ತು ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮನೆ ಖರೀದಿಯಿಂದ ಹಿಡಿದು ಚಪ್ಪಲಿ, ಪೊರಕೆ ಇಡುವ ಸ್ಥಳದವರೆಗೆ ಅನೇಕರು ವಾಸ್ತು ನಿಯಮಗಳನ್ನು ಪಾಲಿಸ್ತಾರೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮಹತ್ವದ ಸ್ಥಾನ ಪಡೆಯುತ್ತದೆ.
ಮನೆಯಲ್ಲಿ ಸುಖ, ಶಾಂತಿ ನೆಲೆಸಲು ವಾಸ್ತು ಬಹಳ ಮುಖ್ಯವಾಗುತ್ತದೆ. ತಪ್ಪು ದಿಕ್ಕಿನಲ್ಲಿ ವಸ್ತುಗಳಿದ್ದರೆ ಅದು ನಮಗೆ ಗೊತ್ತಿಲ್ಲದೆ ತೊಂದರೆಯನ್ನುಂಟು ಮಾಡುತ್ತದೆ. ಹಾಗಾಗಿ ಯಾವ ಯಾವ ವಸ್ತುಗಳು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ದಿಕ್ಕಿನಲ್ಲಿ ಎಂದೂ ಕಸವನ್ನು ಇಡಬೇಡಿ. ಇದು ಕುಟುಂಬಸ್ಥರ ಮೇಲೆ ಹಾನಿಯುಂಟು ಮಾಡುತ್ತದೆ. ಉತ್ತರ ದಿಕ್ಕಿನಲ್ಲಿ ಕಸ ಇಟ್ಟಿದ್ದರೆ ತಕ್ಷಣ ತೆಗೆಯಿರಿ.
ದಕ್ಷಿಣ ದಿಕ್ಕನ್ನು ತಾಯಿ ಲಕ್ಷ್ಮಿಯ ದಿಕ್ಕು ಎನ್ನಲಾಗುತ್ತದೆ. ಹಾಗಾಗಿ ಈ ದಿಕ್ಕಿನಲ್ಲಿಯೂ ಕಸವನ್ನು ಇಡಬಾರದು. ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕೆಂದ್ರೆ, ಆರ್ಥಿಕ ವೃದ್ಧಿ ಬಯಸುವವರು ಅಲ್ಲಿ ಕಸವನ್ನು ಇಡಬೇಡಿ.
ನಿರುದ್ಯೋಗ ಸಮಸ್ಯೆ ನಿಮ್ಮನ್ನು ಕಾಡ್ತಿದ್ದು, ಸದಾ ನೌಕರಿ ಬದಲಿಸುವ ಪರಿಸ್ಥಿತಿ ನಿಮಗಿದ್ದರೆ ಒಮ್ಮೆ ಮನೆಯಲ್ಲಿರುವ ಕಸದ ಬುಟ್ಟಿಯನ್ನು ನೋಡಿ. ಅದು ಯಾವ ದಿಕ್ಕಿನಲ್ಲಿದೆ ಎಂಬುದನ್ನು ಪರೀಕ್ಷಿಸಿ.