ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿ ಮನೆಗೆ ಬರುವ ಮೊದಲು ಅನೇಕ ರೀತಿಯ ಚಿಹ್ನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅನೇಕ ಬಾರಿ ನಾವು ಆರ್ಥಿಕ ಸಮಸ್ಯೆಗಳಿಗೆ ಸಿಲುಕಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಸಹಜ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿ ತನ್ನ ಆಗಮನದ ಮೊದಲು ಅನೇಕ ಮಂಗಳಕರ ಚಿಹ್ನೆಗಳನ್ನು ನೀಡುತ್ತಾಳೆ. ಈ ಚಿಹ್ನೆಗಳನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಂಡರೆ, ಭವಿಷ್ಯದ ತೊಂದರೆಗಳನ್ನು ತಪ್ಪಿಸಬಹುದು. ಈ ಚಿಹ್ನೆಗಳ ಬಗ್ಗೆ ತಿಳಿಯೋಣ.
ಕಪ್ಪು ಇರುವೆಗಳ ಆಗಮನ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನೆಯಲ್ಲಿ ಕಪ್ಪು ಇರುವೆಗಳ ಸಮೂಹವು ಒಟ್ಟಿಗೆ ಕಾಣಿಸಿಕೊಂಡರೆ, ಶೀಘ್ರದಲ್ಲೇ ಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶಿಸಲಿದ್ದಾಳೆ ಎಂದು ಅರ್ಥಮಾಡಿಕೊಳ್ಳಿ. ಮನೆಯಲ್ಲಿನ ಆಹಾರ ಪದಾರ್ಥಗಳ ಮೇಲೆ ಕಪ್ಪು ಇರುವೆಗಳು ಕಂಡುಬಂದರೆ ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಕಪ್ಪು ಇರುವೆಗಳ ಆಗಮನವು ಲಕ್ಷ್ಮಿ ದೇವಿಯ ಪ್ರವೇಶವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ.
ಹಕ್ಕಿಯ ಗೂಡು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ವಚ್ಛತೆ ಮತ್ತು ಸಕಾರಾತ್ಮಕತೆ ಇರುವ ಕಡೆ ಲಕ್ಷ್ಮಿ ನೆಲೆಸುತ್ತಾಳೆ. ಗುಬ್ಬಚ್ಚಿ, ಪಾರಿವಾಳ ಅಥವಾ ಯಾವುದೇ ಪಕ್ಷಿಯ ಗೂಡು ಮನೆಯ ಬಾಲ್ಕನಿಯಲ್ಲಿ ಅಥವಾ ಅಂಗಳದಲ್ಲಿ ಮರದ ಮೇಲೆ ಕಂಡುಬಂದರೆ ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಹಲ್ಲಿಗಳ ದರ್ಶನ
ಹಲ್ಲಿಗಳನ್ನು ನೋಡಿದ್ರೆ ನಾವು ಭಯಪಡುತ್ತೇವೆ. ಅವುಗಳನ್ನು ಓಡಿಸಲು ನೋಡುತ್ತೇವೆ. ಆದರೆ ಕೆಲವೊಮ್ಮೆ ಹಲ್ಲಿಯ ದರ್ಶನವೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೂರು ಹಲ್ಲಿಗಳನ್ನು ಒಟ್ಟಿಗೆ ನೋಡುವುದು ಶುಭ ಸಂಕೇತ. ಇದರರ್ಥ ಶೀಘ್ರದಲ್ಲೇ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರಲಿದ್ದಾಳೆ.
ಅಂಗೈಯ್ಯಲ್ಲಿ ತುರಿಕೆ
ವ್ಯಕ್ತಿಯ ಬಲ ಅಂಗೈಯಲ್ಲಿ ತುರಿಕೆ ಕಂಡುಬಂದರೆ ಶೀಘ್ರದಲ್ಲೇ ನೀವು ಎಲ್ಲಿಂದಲಾದರೂ ಸಾಕಷ್ಟು ಹಣವನ್ನು ಪಡೆಯಲಿದ್ದೀರಿ ಎಂದು ನಂಬಲಾಗಿದೆ. ಇದನ್ನೂ ಕೂಡ ಧನಲಕ್ಷ್ಮಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಶಂಖದ ಶಬ್ದ
ಹಿಂದೂ ಧರ್ಮದಲ್ಲಿ ಶಂಖವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಶಂಖವನ್ನು ಇಟ್ಟರೆ ಅದು ಲಕ್ಷ್ಮಿ ದೇವಿಗೆ ಮೆಚ್ಚುಗೆಯಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಮನೆಯಲ್ಲಿ ಶಂಖದ ಸದ್ದು ಕೇಳಿದರೆ ಅದನ್ನೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಕೂಡ ಲಕ್ಷ್ಮಿಯ ಆಗಮನದ ಶುಭ ಸಂಕೇತ.