
ಶಂಖದ ಬಗ್ಗೆ ನೀವು ಸಾಕಷ್ಟು ತಿಳಿದಿರುತ್ತೀರಿ. ಪ್ರತಿಯೊಂದು ಶುಭ ಕಾರ್ಯದಲ್ಲೂ ಇದನ್ನು ಬಳಸ್ತಾರೆ. ದೇವರ ಪೂಜೆಯಿಂದ ಹಿಡಿದು ಮದುವೆ ಸಮಾರಂಭದಲ್ಲಿಯೂ ಶಂಖವನ್ನು ಶುಭವೆಂದು ಪರಿಗಣಿಸಲಾಗಿದೆ. ಈ ಶಂಖದಿಂದ ನೀವು ಇಚ್ಛಿಸಿದಷ್ಟು ಪ್ರೀತಿ ಜೊತೆಗೆ ಹಣ ಸಿಗಲಿದೆ ಎಂಬ ವಿಷ್ಯ ನಿಮಗೆ ಗೊತ್ತಾ?
ತಾಯಿ ಲಕ್ಷ್ಮಿ ಕೈನಲ್ಲಿ ಹಿಡಿದಿರುವ ಶಂಖ ದಕ್ಷಿಣಾವರ್ತಿ. ಇದನ್ನು ಲಕ್ಷ್ಮಿ ಶಂಖವೆಂದೂ ಕರೆಯುತ್ತಾರೆ. ಇದು ಬಲಮುರಿ ಶಂಖವಾಗಿದೆ. ಸಾಮಾನ್ಯವಾಗಿ ಸಿಗುವ ಶಂಖಗಳು ಎಡಮುರಿ ಶಂಖಗಳಾಗಿರುತ್ತವೆ.
ದಕ್ಷಿಣಾವರ್ತಿ ಶಂಖವನ್ನು ತಾಯಿ ಲಕ್ಷ್ಮಿ ಎದುರು ಕೆಂಪು ಬಟ್ಟೆಯಲ್ಲಿಟ್ಟು ಪೂಜೆ ಮಾಡಬೇಕು. ಹೀಗೆ ಮಾಡಿದ್ರೆ ಮನೆಯಲ್ಲಿ ತಾಯಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ.
ಪ್ರೇಮಿ ಜೊತೆ ಅಥವಾ ದಾಂಪತ್ಯದಲ್ಲಿ ಸದಾ ಗಲಾಟೆ ನಡೆಯುತ್ತಿದ್ದರೆ ಸಂಬಂಧ ವೃದ್ಧಿಸಲು ಹೀರಾ ಶಂಖ ಲಾಭದಾಯಕ.
ಈ ಹೀರಾ ಶಂಖದಿಂದ ಶುಕ್ರ ಗ್ರಹದ ದೋಷ ನಿವಾರಣೆಯಾಗುತ್ತದೆ. ಶುಕ್ರನನ್ನು ಪ್ರೀತಿಯ ಗ್ರಹವೆಂದು ಪರಿಗಣಿಸಲಾಗಿದೆ. ಪ್ರೇಮಿಗಳನ್ನು ಹತ್ತಿರ ಮಾಡಲು ಈ ಶಂಖ ನೆರವಾಗುತ್ತದೆ.
ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವಿಷ್ಣು ಶಂಖ ಲಾಭದಾಯಕ. ಅರ್ಧ ಚಂದ್ರನಾಕಾರದಲ್ಲಿರುವುದರಿಂದ ಇದನ್ನು ಚಂದ್ರ ಶಂಖವೆಂದೂ ಕರೆಯುತ್ತಾರೆ. ಯಾರ ಬಳಿ ಈ ಶಂಖವಿರುತ್ತದೆಯೋ ಆ ವ್ಯಕ್ತಿ ಎಂದೂ ಬಡತನದಿಂದ ಬಳಲುವುದಿಲ್ಲ.