ಮನೆಯ ಮುಂದೆ ಜೋಡಿ ಆನೆಯ ಮೂರ್ತಿಯನ್ನು ಸ್ಥಾಪಿಸೋದು ಶುಭಕರ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಿಂದೂ ಧರ್ಮದಲ್ಲಿ ಆನೆಗಳಿಗೆ ಮಹತ್ವದ ಸ್ಥಾನವಿದೆ.
ಇಂದ್ರದೇವರ ವಾಹನ ಕೂಡ ಗಜರಾಜನೇ. ಅದೇ ರೀತಿ ಲಕ್ಷ್ಮೀ ಕೂಡ ಶ್ವೇತವರ್ಣದ ಆನೆಯ ಮೇಲೆ ಸವಾರಿ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಬಹುಶಃ ಇದೇ ಕಾರಣಕ್ಕೆ ಆನೆಗಳನ್ನು ನಿರ್ಮಿಸೋದು ಉತ್ತಮ ಎಂದು ಹಿರಿಯರು ಹೇಳಿರಬಹುದು. ಆನೆಯ ಮೂರ್ತಿಯು ಪ್ರಗತಿ ಹಾಗೂ ಸಂತೋಷದ ಸಂಕೇತವಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಸೊಂಡಿಲನ್ನು ಎತ್ತಿದ ಆನೆಯ ಮೂರ್ತಿ ಮನೆಯ ಅಥವಾ ಕಚೇರಿ ಆವರಣದಲ್ಲಿ ಪ್ರತಿಷ್ಟಾಪಿಸುವುದು ಶುಭಕರ ಎಂಬ ನಂಬಿಕೆ ಇದೆ. ಇದು ಸಂತಸ ಹಾಗೂ ಅದೃಷ್ಟವನ್ನು ಹೊತ್ತು ತರುತ್ತದೆ. ಅಲ್ಲದೇ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲಿದೆ ಎಂದೂ ಹೇಳಲಾಗುತ್ತದೆ.