ಅಡುಗೆ ಮನೆಗೆ ಬರುವ ಬೇಡದ ಅತಿಥಿಗಳೆಂದರೆ ಇರುವೆಗಳು. ಎಣ್ಣೆ ಪದಾರ್ಥಗಳಿಂದ ಹಿಡಿದು, ಸಕ್ಕರೆ, ಬೆಲ್ಲ ಎಲ್ಲದರಲ್ಲೂ ಇರುವೆಗಳ ರಾಶಿ ಮುತ್ತಿಕೊಂಡು ಬಿಡುತ್ತದೆ. ಮೋಡ ಕವಿದ ವಾತಾವರಣವಿದ್ದರೆ ಇರುವೆಗಳ ಕಾಟ ಇನ್ನೂ ಜಾಸ್ತಿ.
ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಈ ಸಮಸ್ಯೆ ಇದ್ದೇ ಇದೆ. ಇರುವೆಗಳು ಬರದಂತೆ ಯಾವುದಾದರೂ ರಾಸಾಯನಿಕಯುಕ್ತ ಔಷಧಗಳನ್ನು ಹಾಕಿದ್ರೆ ಅದರಿಂದ ಬೇರೆ ಬೇರೆ ತೆರನಾದ ಅಪಾಯವಾಗುವ ಸಾಧ್ಯತೆ ಇದೆ. ಹಾಗಾಗಿ ಇರುವೆಗಳು ಬರದಂತೆ ತಡೆಯಲು ಅತ್ಯಂತ ಸುಲಭದ ತಂತ್ರವೊಂದನ್ನು ನಾವ್ ಹೇಳ್ತೀವಿ.
ಮನೆಯಿಂದ ಇರುವೆಗಳನ್ನು ದೂರವಿಡಲು ಟಾಲ್ಕಮ್ ಪೌಡರ್ ತನ್ನಿ. ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಈ ಪೌಡರ್ ದೊರೆಯುತ್ತದೆ. ಎಲ್ಲೆಲ್ಲಿ ಎಂಟ್ರಿ ಪಾಯಿಂಟ್ ಇದ್ಯೋ ಅಲ್ಲೆಲ್ಲ ಟಾಲ್ಕಮ್ ಪೌಡರ್ ಅನ್ನು ಹಾಕಿ. ಸ್ವಲ್ಪ ಹೊತ್ತಿನಲ್ಲೇ ಇರುವೆಗಳೆಲ್ಲ ಮಾಯವಾಗುತ್ತವೆ. ಈಗಾಗ್ಲೇ ಈ ಪ್ರಯೋಗ ಮಾಡಿ ನೋಡಿರುವ ಹಲವರು ಇದು ಪರಿಣಾಮಕಾರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲೆಲ್ಲಿ ಇರುವೆಗಳು ಎಂಟ್ರಿ ಕೊಡುವ ಸಾಧ್ಯತೆ ಇರುತ್ತದೆಯೋ ಅಲ್ಲೆಲ್ಲಾ ಟಾಲ್ಕಮ್ ಪೌಡರ್ ಅನ್ನು ಸಿಂಪಡಿಸಬೇಕು. ಈ ಸರಳ ವಿಧಾನದ ಮೂಲಕ ನೀವು ಕೂಡ ಇರುವೆಗಳನ್ನು ಹೊಡೆದೋಡಿಸಬಹುದು.