
ಜೀವನದಲ್ಲಿ ಸುಖವಾಗಿರಲು ನೀವು ವಾಸ್ತುಗಳಿಗೆ ಸಂಬಂಧಪಟ್ಟ ವಿಚಾರಗಳಿಗೆ ಹೆಚ್ಚು ಮಹತ್ವ ನೀಡಬೇಕು. ಅದರಲ್ಲೂ ಮನೆಯಲ್ಲಿಡುವ ವಸ್ತುಗಳ ಬಗ್ಗೆ ಗಮನಹರಿಸಬೇಕು. ಮನೆಯ ಅಲಂಕಾರಕ್ಕಾಗಿ ಮೂರ್ತಿಗಳನ್ನು ತಂದಿಡುತ್ತೀರಿ ಆದರೆ ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಒಳ್ಳೆಯದಾಗುತ್ತದೆ. ಇಲ್ಲವಾದರೆ ಸಮಸ್ಯೆಗಳು ಬಂದು ಕಾಡುತ್ತವೆ.
ಆಮೆಯನ್ನು ವಿಷ್ಣುವಿನ ಸ್ವರೂಪದಲ್ಲಿ ಪೂಜಿಸುತ್ತಾರೆ. ಹಾಗಾಗಿ ಇದರ ಮೂರ್ತಿಯನ್ನು ಮನೆಯಲ್ಲಿಟ್ಟರೆ ಒಳ್ಳೆಯದು ನಿಜ. ಆದರೆ ಆಮೆ ಮೂರ್ತಿಯನ್ನು ಇಡುವಾಗ ಅದರ ಕೆಳಗಡೆ ನೀರಿನ ಬಟ್ಟಲು ಇಡಬೇಕು. ಹಾಗೇ ಆಮೆಯ ಮೂರ್ತಿಯನ್ನು ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಿ.
ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಗೋಮಾತೆಯ ಮೂರ್ತಿಯನ್ನು ಮನೆಯಲ್ಲಿಟ್ಟರೆ ಒಳ್ಳೆಯದು. ಆದರೆ ಗೋಮಾತೆಯ ಮೂರ್ತಿಯನ್ನು ಇಡುವಾಗ ಅದರ ಮುಖ ಪೂರ್ವ ದಿಕ್ಕಿನ ಕಡೆಗೆ ಇರಬೇಕು.
ಆನೆ ಗಜ ಲಕ್ಷ್ಮಿಯ ಸ್ವರೂಪ ಎನ್ನುತ್ತಾರೆ. ಹಾಗಾಗಿ ಮನೆಯಲ್ಲಿ ಜೋಡಿ ಆನೆ ಮೂರ್ತಿಯನ್ನು ಇಡಬೇಕು. ಹಾಗೇ ಆನೆಯ ಮುಖವು ಉತ್ತರ ದಿಕ್ಕಿನಲ್ಲಿರಬೇಕು.