ಮನೆಯ ಶೊಕೇಸ್ ನಲ್ಲಿಯೋ ಅಥವಾ ಟೇಬಲ್ ಮೇಲೆಯೋ ದೇವರ ಮೂರ್ತಿ, ಹೂಗಳು, ಅಲಂಕಾರಿಕ ವಸ್ತುಗಳು ಮುಂತಾದವನ್ನು ಇಡುತ್ತೇವೆ. ಇಂತಹ ವಸ್ತುಗಳಿಂದ ಮನೆಯ ಅಂದ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ. ದೇವರ ಮೂರ್ತಿಯಂತೆಯೇ ಪ್ರಾಣಿಗಳ ಮೂರ್ತಿ ಕೂಡ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಗಜಮುಖನ ಪ್ರತೀಕವಾದ ಆನೆಯ ಮೂರ್ತಿಯನ್ನು ಮನೆಯೊಳಗೆ ಇಡುವುದರಿಂದಲೂ ಅನೇಕ ಲಾಭಗಳಿವೆ.
ಫೆಂಗ್ ಶುಯಿಯ ಪ್ರಕಾರ, ಸೊಂಡಿಲು ಮೇಲೆತ್ತಿರುವ ಆನೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ಅದರಿಂದ ಸಕಾರಾತ್ಮಕ ಶಕ್ತಿ ಮನೆಗೆ ಬರುತ್ತದೆ. ಮನೆಯ ಬಾಗಿಲಲ್ಲಿ ಆನೆಯ ಮೂರ್ತಿಯನ್ನು ಇಡುವುದು ಕೂಡ ಒಳ್ಳೆಯದು.
ಆನೆಯನ್ನು ರಕ್ಷಕನನ್ನಾಗಿ ಕೂಡ ನೋಡಲಾಗುತ್ತದೆ. ಮನೆಗೆ ಕೆಟ್ಟ ದೃಷ್ಠಿ ತಾಗದಿರಲು ಎರಡು ಆನೆಗಳನ್ನು ಹೊರಮುಖವಾಗಿ ಇಡಬೇಕು.
ತಾಯಿ ಮಕ್ಕಳ ಸಂಬಂಧ ಚೆನ್ನಾಗಿರಲು ಆನೆ ಮತ್ತು ಮರಿ ಆನೆಯ ಮೂರ್ತಿ ಅಥವಾ ಪೇಂಟಿಂಗ್ ಅನ್ನು ರೂಮಿನಲ್ಲಿ ಇಡಿ.
ಗಂಡ ಹೆಂಡತಿಯ ನಡುವೆ ಕಲಹವಾಗುತ್ತಿದ್ದರೆ, ಆನೆಯ ಜೋಡಿ ಮೂರ್ತಿಯನ್ನು ಅಥವಾ ಪೇಂಟಿಂಗ್ ಅನ್ನು ರೂಮಿನಲ್ಲಿಡಿ. ಆನೆಯ ಚಿತ್ರವಿರುವ ಕುಶನ್ ಕವರ್ ಅನ್ನು ಕೂಡ ರೂಮಿನಲ್ಲಿ ಹಾಕಬಹುದು.
ಮಕ್ಕಳ ರೂಮಿನಲ್ಲಿ ಆಟಿಕೆ, ವಾಲ್ ಪೇಪರ್, ಮೂರ್ತಿ ಅಥವಾ ಕುಶನ್ ಕವರ್ ರೂಪದಲ್ಲಿ ಆನೆಯನ್ನು ಇಡಬೇಕು. ಇದರಿಂದ ಮಕ್ಕಳ ಜ್ಞಾನ, ಏಕಾಗ್ರತೆ ಹೆಚ್ಚುತ್ತದೆ. ಆನೆಯ ಮೂರ್ತಿಯನ್ನು ಮಕ್ಕಳ ಸ್ಟಡಿ ಟೇಬಲ್ ಮೇಲೆ ಕೂಡ ಇಡಬಹುದು.
ಭವಿಷ್ಯದಲ್ಲಿ ಉತ್ತಮ ಫಲ ಸಿಗಲು ಕಚೇರಿಯಲ್ಲಿ ಆನೆಯ ಮೂರ್ತಿಯನ್ನು ಇಡಬಹುದು.
ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಮತ್ತು ಕಚೇರಿಯಲ್ಲಿ ಕೆಲಸಗಳು ಸರಾಗವಾಗಿ ನಡೆಯಲು ಕ್ರಿಸ್ಟಲ್ ಬಾಲ್ ಹಿಡಿದಿರುವ ಆನೆಯ ಮೂರ್ತಿಯನ್ನು ಸ್ಥಾಪಿಸಬಹುದು.