ಹಿಂದೂ ಧರ್ಮದಲ್ಲಿ ದೀಪ ಹಾಗೂ ಧೂಪಕ್ಕೆ ಬಹಳ ಮಹತ್ವದ ಸ್ಥಾನವಿದೆ. ಹಿಂದಿನಿಂದ ನಡೆದು ಬಂದ ಸಂಪ್ರದಾಯಗಳು ಕೆಲ ಮನೆಯಲ್ಲಿ ಈಗಲೂ ಆಚರಣೆಯಲ್ಲಿವೆ. ಪ್ರತಿದಿನ ದೀಪದ ಜೊತೆ ಧೂಪ ಬೆಳಗುವ ರೂಢಿ ಇದೆ.
ಪ್ರತಿದಿನ ಧೂಪ ಬೆಳಗುವುದು ಎಲ್ಲರಿಗೂ ಸಾಧ್ಯವಿಲ್ಲ. ಅಂತವರು ಅಮವಾಸ್ಯೆ, ಹುಣ್ಣೆಮೆಯಂದು ಬೆಳಿಗ್ಗೆ ಹಾಗೂ ಸಂಜೆ ಧೂಪ ಹಚ್ಚಬೇಕು. ಬೆಳಿಗ್ಗೆ ಹಚ್ಚುವ ಧೂಪ ದೇವರಿಗಾಗಿ. ಸಂಜೆ ಹಚ್ಚುವ ಧೂಪ ಪಿತೃಗಳಿಗಾಗಿ. ಧೂಪ ಹಚ್ಚುವ ಮೊದಲು ಮನೆಯನ್ನು ಸ್ವಚ್ಛಗೊಳಿಸಿಕೊಳ್ಳಿ. ಈಶಾನ್ಯ ಭಾಗದಲ್ಲಿ ಧೂಪವನ್ನು ಹಚ್ಚಬೇಕು. ಮನೆಯ ಪ್ರತಿಯೊಂದು ಕೋಣೆಗೂ ಧೂಪದ ಹೊಗೆ ಹೋಗುವಂತೆ ನೋಡಿಕೊಳ್ಳಿ.
ಧೂಪ ಹಚ್ಚಿದ ನಂತ್ರ ಅದ್ರ ಹೊಗೆ ಹೋಗುವವರೆಗೂ ಯಾವುದೇ ರೀತಿಯ ಸಂಗೀತವನ್ನು ಹಾಕಬಾರದು. ಸಾಧ್ಯವಾದಷ್ಟು ಕಡಿಮೆ ಮಾತನಾಡಿ. ಧೂಪ ಹಚ್ಚುವುದರಿಂದ ಮನೆ, ಮನಸ್ಸು, ಶರೀರದಲ್ಲಿ ಶಾಂತಿ ನೆಲೆಸುತ್ತದೆ. ರೋಗ ಹಾಗೂ ಶೋಕ ದೂರವಾಗುತ್ತದೆ. ಗೃಹ ಕಲಹ, ಆಕಸ್ಮಿಕ ದುರ್ಘಟನೆಗಳು ಕಡಿಮೆಯಾಗುತ್ತವೆ. ಮನೆಯಲ್ಲಿರುವ ಎಲ್ಲ ನಕಾರಾತ್ಮಕ ಶಕ್ತಿ ದೂರವಾಗಿ ವಾಸ್ತು ದೋಷ ಕಡಿಮೆಯಾಗುತ್ತದೆ.